..
ಭಾರತಿ ಗುರುವರ ಗುರುಮಾರುತಿ ಕರುಣಿಸೊ
ಸಾರಿದೆ ತವ ಪದ ಸಾರಸವ ಪ
ದಾಶರಧಿಗೆ ನಿಜ ದಾಸನೆನಿಸಿ | ಕಮಲಾ
ಸನ ಪದವಿಯ ಪೊಂದಿದ್ಯೋ ನೀ
ಭೂಸುತೆ ಚೋರನ ಭಾಸುರ ಪುರವ ಹು
ತಾಶನಿಗುಣಿಸಿದ ಕೀಶ ನಮೋ 1
ಪುನಃ ದ್ವಾಪರದಲಿ ಜನಿಸಿ ಧ
ರ್ಮಾನುಜನೆನಿಸಿ | ಭೂಭಾರ
ದನುಜರ ರಣದಿ ಹೂಂಕಾರದಿ ಕುಣಿದು ಹರಿ
ಮನ ಘನ ಮೆಚ್ಚಿಸಿದ ಭೀಮ ನಮೋ 2
ಶ್ರೀಮದಾನಂದ ಮುನಿ ನಾಮದಿ ಪರಾತ್ವರ
ಶಾಮಸುಂದರನೆಂದು ಸ್ಥಾಪಿಸಿದಿ
ನೇಮದಿ ಭಜಪರ ಕಾಮಿತ ಗರಿಯುವ
ಗ್ರಾಮ ಬಲ್ಲಟಗಿ ಧಾಮ ನಮೋ 3
***