Showing posts with label ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ karpara narahari. Show all posts
Showing posts with label ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ karpara narahari. Show all posts

Saturday, 1 May 2021

ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ ankita karpara narahari

 ಕಾರ್ಪರ ನರಹರಿದಾಸರು ರಚಿಸಿದ ಪ್ರಸಿದ್ಧ ಕೃತಿಗಳು


ಇಂದು ಆರುತಿ ತಂದು ಬೆಳಗಿರೆ

 ಸಿಂಧುರಾಜನ ಕುವರಿಗೆ

ಸಿಂಧು ರಾಜನ ಕುವರಿಗೆ 

ಅರವಿಂದ ನಾಭನ ಮಡದಿಗೆ || ಪ ||


ಅಂದು ಸುರಕೃತ ಸಿಂಧು ಮಥನದಿ ಬಂದು

ನೋಡುತ ಕೃಷ್ಣಗೆ

ವಂದಿಸುತ ಪೂಮಾಲೆ ಹಾಕಿದ

ನಂದಗೋಪಕುಮಾರಗೆ || 1 ||


ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ 

ಸುರರೊಳು ಕೃಷ್ಣಗೆ

ಇಲ್ಲ ಸಮರೆಂತೆಂಬುದನು ಜಗಕೆಲ್ಲ 

ತೋರಿದ ದೇವಿಗೆ || 2 ||


ವಾರವಾರದಿ ಚಾರುಪದಯುಗ 

ಸಾರಿಭಜಿಸುವ ಜನರಿಗೆ 

ಆ-ಪಾರ ಸೌಖ್ಯಗಳೀವ 

ಕಾರ್ಪರ ನಾರಸಿಂಹನ ರಾಣಿಗೆ || 3 ||

****