Showing posts with label ಶಿವದರುಶನ ನಮಗಾಯಿತು ಕೇಳೆ purandara vittala SHIVA DARUSHANA NAMAGAAYITU KELE. Show all posts
Showing posts with label ಶಿವದರುಶನ ನಮಗಾಯಿತು ಕೇಳೆ purandara vittala SHIVA DARUSHANA NAMAGAAYITU KELE. Show all posts

Wednesday, 29 December 2021

ಶಿವದರುಶನ ನಮಗಾಯಿತು ಕೇಳೆ purandara vittala SHIVA DARUSHANA NAMAGAAYITU KELE


CHAITRA SURESH RAO 2017





ರಾಗ: ಮಧ್ಯಮಾವತಿ/ಆದಿ ತಾಳ

ಶಿವದರುಶನ ನಮಗಾಯಿತು ಕೇಳಿ
ಶಿವರಾತ್ರಿಯ ಜಾಗರಣೆ || ಪಲ್ಲವಿ ||

ಪಾತಾಳಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು || ೧ ||

ಬೇಡಿದ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು || ೨ ||

ಹರನನು ಕಂಡೆನು ಪುರಂದರವಿಠಲನ
ಹರಿನಾರಾಯಣನ ಧ್ಯಾನದಲಿ || ೩ ||
***

Siva darusana namagayitu kele
Sivaratriya jagarane ||

Patala gangeya snanava madalu
Patakavella pariharavu
Jyotirlingana dhyanava madalu
Dyutagalilla anudinavu ||

Bediva varagala koduvanu tayi
Brahmana raniya noduvanu
Aduta paduta Eruta basavana
Anamdadali nalidaduvanu ||

Sikarava kandenu purandaravithalana
Harinarayana dhyanadale ||
***

pallavi

shiva darushana namagAidu kELE shivarAtriya jAgaraNe

anupallavi

pAtALa gangeya snAnava mADalu pAtakavella parihAravu jyOti lingana dhyAnava mADalu dyUtagaLilla anudinavu

caraNam

bEDida varagaLa koDuvanu tAyi brhmaNa rANiya nODuvanu Aduta pADuta vELaya pasavana
Anandadali nalidADuvanu cigaravu kaNDenu purandara viTTalana hari nArAyaNa dhyAnadali
***

ಶಿವ ದರುಶನ ನಮಗಾಯಿತು ಕೇಳೆ
ಶಿವರಾತ್ರಿಯ ಜಾಗರಣೆ ||

ಪಾತಾಳ ಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು ||

ಬೇಡಿವ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು ||

ಶಿಖರವ ಕಂಡೆನು ಪುರಂದರವಿಠಲನ
ಹರಿನಾರಾಯಣ ಧ್ಯಾನದಲೆ ||
******

ಶ್ರೀ ಪುರಂದರದಾಸರ ಕೃತಿ 

 ರಾಗ ಮಧ್ಯಮಾವತಿ              ಆದಿತಾಳ 

ಶಿವ ದರುಶನ ನಮಗಾಯಿತು ಕೇಳಿ ।
ಶಿವರಾತ್ರಿಯ ಜಾಗರಣೆಯಲಿ ॥ ಪ ॥

ಪಾತಾಳ ಗಂಗೆಯ ಸ್ನಾನವ ಮಾಡಲು ।
ಪಾತಕವೆಲ್ಲವು ಪರಿಹಾರವು ॥
ಜ್ಯೋತಿರ್ಲಿಂಗವ ಧ್ಯಾನವ ಮಾಡಲು ।
ದ್ಯೂತಗಳಿಲ್ಲವು ಅನುದಿನವು ॥ 1 ॥

ಬೇಡಿದ ವರಗಳ ಕೊಡುವನು ತಾಯಿ - ।
ಬ್ರಹ್ಮನ ರಾಣಿಯ ನೋಡುವನು ॥
ಆಡುತ ಪಾಡುತ ಏರುತ ಬರುವನು ।
ಆನಂದದಲಿ ನಲಿದಾಡುವನು ॥ 2 ॥

ಹರನನು ಕಂಡೆನು ಪುರಂದರವಿಠಲನ ।

ಹರಿನಾರಾಯಣ ಧ್ಯಾನದಲಿ ॥ 3 ॥
***********