ಕಾಖಂಡಕಿ ಶ್ರೀ ಕೃಷ್ಣದಾಸರು
ಸಾರವಲ್ಲ ಸಂಸಾರವಿದು ಪ
ತನುವಿನ ಪಾಶವು ವನಿತೆರ ಪಾಶವು | ಉಣಲುಡುಪಾಶಾ ಹಣಗಳ ಪಾಶವು | ಮನೆ ಪಶು ಪಾಶಾ ಇನಿತಿಹ ಪಾಶದ | ಮನುಜಗ ಸುಖವೆ 1
ಭ್ರಾಂತಿಯ ಮಂದಿರ ಚಿಂತೆಯ ಮಡುವು | ಪಂಥವು ನರಕದ ಕಂತುವಿನಾಶ್ರಯ | ಖಂತಿಯ ನೆಲೆಭವ ಜಂತುರ ನೋಡಲು | ಸಿಂತರ ಬೀಳುವಂತಿನಾ ಜನುಮಾ 2
ತಾಪತ್ರಯ ನಾನಾ ಪರಿಯಿಂದಲಿ | ವ್ಯಾಪಿಸಿಕೊಂಡಿಹ ದೀಪರಿ ಭವಣಿ | ಆ ಪರಗತಿ ನಿನಗಾಪೇಕ್ಷಾದರ | ಪಡಿ ತಂದೆ ಮಹಿಪತಿ ಬೋಧಾ 3
***