Showing posts with label ಮರುದಂಶರ ಮತ ಪಿಡಿಯದೆ rangavittala. Show all posts
Showing posts with label ಮರುದಂಶರ ಮತ ಪಿಡಿಯದೆ rangavittala. Show all posts

Wednesday, 11 December 2019

ಮರುದಂಶರ ಮತ ಪಿಡಿಯದೆ ankita rangavittala

ಮರುದಂಶರ ಮತ ಪಿಡಿಯದೆ । ಇಹ । 

ಪರದಲ್ಲಿ ಸುಖವಿಲ್ಲವಂತೆ ।। ಪಲ್ಲವಿ ।।


ಅರಿತು ವಿವೇಕದಿ ಮರೆಯದೆ ನಮ್ಮ ।

ಗುರುರಾಯರ ನಂಬಿ ಬದುಕಿರೋ ।। ಅ ಪ ।।


ಕ್ಷೀರವ ಕರೆದಿಟ್ಟ ಮಾತ್ರದಿ । ಸಂ ।

ಸ್ಕಾರವಿಲ್ಲೆ ಘೃತವಾಗದಂತೆ ।

ಸೂರಿ ಜನರ ಸಂಗವಿಲ್ಲದೆ ಸಾರ ।

ವೈರಾಗ್ಯ ಭಾಗ್ಯ ಪುಟ್ಟದಂತೆ ।। ಚರಣ ।।


ಉಪದೇಶವಿಲ್ಲದೆ ಮಂತ್ರ ಏಸು । 

ಜಪಿಸಲು ಫಲಗಳ ಕೊಡದಂತೆ ।

ಉಪವಾಸ ವ್ರತಗಳಿಲ್ಲದೆ ಜೀವ ।

ತಪಸಿಯೆನಿಸಿ ಕೊಳ್ಳಲರಿಯನಂತೆ ।। ಚರಣ ।।


ಸಾರ ಮಧ್ವ ಶಾಸ್ತ್ರ ಓದದೇ ।

ತಾರತಮ್ಯ ಜ್ಞಾನ ಪುಟ್ಟದಂತೆ ।

ಶ್ರೀ ರಂಗ ವಿಠಲನ ಭಜಿಸದೆ ಮುಂದೆ ।

ಪರಮಗತಿ ದೊರಕೊಳ್ಳದಂತೆ ।। ಚರಣ ।।

******


ಮರುದಂಶರ ಮತ ಪಿಡಿಯದೆ ಇಹ –
ಪರದಲ್ಲಿ ಸುಖವಿಲ್ಲವಂತೆ || ಪ ||

ಅರಿತು ವಿವೇಕದಿ ಮರೆಯದೆ ನಮ್ಮ
ಗುರುರಾಯರ ನಂಬಿ ಬದುಕಿರೋ || ಅ.ಪ ||

ಕ್ಷೀರವ ಕರೆದಿಟ್ಟ ಮಾತ್ರದಿ ಸಂ
ಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರ
ವೈರಾಗ್ಯ ಭಾಗ್ಯ ಪುಟ್ಟದಂತೆ || ೧ ||

ಉಪದೇಶವಿಲ್ಲದ ಮಂತ್ರ ಏಸು
ಜಪಿಸಲು ಗರಳ ಕೊದಗದಂತೆ
ಉಪವಾಸ ವ್ರತಗಳಿಲ್ಲದೆ ಜೀವ
ತಪಸಿಯೆನಿಸಿಕೊಳ್ಳಲರಿಯನಂತೆ || ೨ ||

ಸಾರಮಧ್ವಶಾಸ್ತ್ರವೋದದೆ ಗುರು
ತಾರತಮ್ಯ ಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸಿದೆ ಮುಂದೆ
ಪರಮಗತಿ ದೊರಕೊಳ್ಳದಂತೆ || ೩ ||
********


ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ|| ಪ||

ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ||ಅ.ಪ||

ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ ||

ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ ||

ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಸುಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ ||

******