..
ಹರಿಗೆ ನಾ ಮೊರೆಹೊಕ್ಕೆನೊ ದಯಾಳು ಶ್ರೀ-
ಹರಿಗೆ ನಾ ಮೊರೆಹೊಕ್ಕೆನೊ
ಹರಿಗೆ ನಾ ಮೊರೆಹೊಕ್ಕೆನೊ ಪೊರೆಯ ಬೇಕೆಂದಿನ್ನು
ಜರಿದು ನೋಡುವರೇನೊ ಪರಮ ದಯಾಳು ಪ
ವೆಂಕಟರಮಣನೆ ಕಿಂಕರರಿಗೆ ಬಂದ
ಸಂಕಟ್ಹರಣ ಮಾಡಲಂಕಾರ ಮೂರುತಿ 1
ಸದ್ಯೋಜಾತನು ತಪವಿದ್ದ ಸ್ಥಳದಿ ಬಂದು
ಉದ್ಭವಿಸಿದ ಅನಿರುದ್ಧ ಮೂರುತಿಯೆನೆ 2
ಶೇಷಶಯನ ನೀ ಆದಿಶÉೈಲವಾಸನೆ
ದಾಸರಿಗೊಲಿವಂಥ ಭೀಮೇಶಕೃಷ್ಣನೆ 3
***