ಶ್ರೀ ಸುರಪುರದ ಆನಂದದಾಸರ ಕೃತಿ ( ಕಮಲೇಶವಿಠಲಾಂಕಿತ )
ರಾಗ : ಮುಖಾರಿ ಆದಿತಾಳ
ಶ್ರೀ ರಾಘವೇಂದ್ರ ಬಾರೈ ಮುನೀಂದ್ರ
ಮೊರೆಯಿಡುವೆ ನಿನ್ನೊಳು ದೇವಾ॥ಪ॥
ತುಂಗಾತೀರದಿ ನೆಲೆಸಿರುವಾತ
ಬಂದ ಭಕ್ತರಿಗೆ ಫಲವನ್ನೇ ನೀಡು ॥೧॥
ಮಗುವೆಂದು ಬಗೆದು ಅಪರಾಧ ಕ್ಷಮಿಸಿ
ಅಲ್ಪಮಾತಿಗೆ ಕಲ್ಪನೆ ನೀಡು ॥೨॥
ಕಮಲೇಶವಿಠಲ ಸೇವೆಯಮಾಡಿ
ಬಂದ ಭಕ್ತರಿಗೆ ವರವನ್ನೇ ನೀಡು ॥೩॥
****
ಬಾಲಕನ ರೂಪದಲ್ಲಿ ಶ್ರೀ ರಾಯರು ಕಂಡು ಬಂದದ್ದನ್ನು ನೋಡಿ ಶ್ರೀ ರಾಯರ ಭಕ್ತರ ಮೇಲಿರುವ ಕಾರುಣ್ಯವನ್ನು ನೆನೆದು ನೆನೆದು ಧಾರಾಕಾರವಾಗಿ ಕಣ್ಣಿನಲ್ಲಿ ನೀರು ಹರಿಯುತ್ತಿದೆ.
ಶ್ರೀ ಆನಂದದಾಸರು ಶ್ರೀ ರಾಯರು ತಮ್ಮ ಮೇಲೆ ತೋರಿದ ಕಾರುಣ್ಯವನ್ನು ನೆನೆದು ಆನಂದಬಾಷ್ಪ ಸುರಿಸುತ್ತಾ....
ಶ್ರೀ ರಾಘವೇಂದ್ರ
ಬಾರೈ ಮುನೀಂದ್ರ ।
ಮೊರೆಯಿಡುವೆ
ನಿನ್ನೊಳು ದೇವಾ ।। ಪಲ್ಲವಿ ।।
ತುಂಗಾ ತೀರದಿ
ನೆಲೆಸಿರುವಾತ ।
ಬಂದ ಭಕ್ತರಿಗೆ ಫಲವನ್ನೇ
ನೀಡುವ ।। ಚರಣ ।।
ಮಗುವೆಂದು ಬಗೆದು
ಅಪರಾಧ ಕ್ಷಮಿಸಿ ।
ಅಲ್ಪಮಾತಿಗೆ
ಕಲ್ಪನೆ ನೀಡು ।। ಚರಣ ।।
ಕಮಲೇಶವಿಠ್ಠಲ
ಸೇವೆಯ ಮಾಡಿ ।
ಬಂದ ಭಕ್ತರಿಗೆ
ವರವನ್ನೆ ನೀಡು ।। ಚರಣ ।।
****
ಶ್ರೀ ಸುಧೀಂದ್ರಾಬ್ಧಿ ಸಂಭೂತಾನ್ ರಾಘವೇಂದ್ರ ಕಲಾನಿಧೀನ್
ಸೇವೇ ಸುಜ್ಞಾನ ಸೌಖ್ಯರ್ಥಂ ಸಂತಾಪತ್ರಯ ಶಾಂತಯೇ॥