ದೀನ ದಯಾಳು ನೀನೆವೆ ನಮ್ಮ ಅನಾಥನಾಥಾ ನಂದೊ ಬ್ರಹ್ಮನಂತುಗಾಣನುಪಮ ಪ
ಪರಮಾನಂದ ಪರಮ ಪಾವನ ಶರಣ ಜನರಾಭರಣಾಗಿ ಹ್ಯ ಕರುಣ ಸಾಗರ ಪೂರ್ಣನೆ 1
ಅವ್ಯಕ್ತನಹುದೊ ವಿರಕ್ತ ಶಕ್ತನಹುದೊ ಭಕ್ತವತ್ಸಲ ಭೋಕ್ತರ ಮುಕ್ತಿದಾಯಕ 2
ಭೇದಾತೀತ ಸದೋದಿತ ಪೂರ್ಣ ಸಾಧುಹೃದಯನಿವೇದ ಪೂಜಿತ ಅದಿದೇವ ಸದಾತ್ಮನೆ 3
ವರ ಮುನಿಗಳ ಹರುಷವುದಯ ತರಳ ಮಹಿಪತಿಯ ಹೊರೆವ ಅನುದಿನ ಹರಿಯು ಪರಮ ದಯಾನಿಧೆ 4
***