Showing posts with label ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತ purandara vittala. Show all posts
Showing posts with label ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತ purandara vittala. Show all posts

Friday, 6 December 2019

ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತ purandara vittala

ಪುರಂದರದಾಸರು
ರಾಗ ಕಾಂಭೋಜ. ಛಾಪು ತಾಳ

ಪತಿಭಕುತಿ ಇಲ್ಲದಿಹ ಸತಿಯ ಸಂಗ
ವ್ರತಗೆಟ್ಟು ಸುಖ ಪಡೆಯಲಿಲ್ಲವೋ ರಂಗ ||ಪ||

ಗಂಡ ಬಂದರೆ ಎದ್ದು ನಿಲ್ಲದೆ ಮಂಚದ ಮೇಲೆ
ಚಂದದಲಿ ಕುಳಿತು ಮಾತಾಡುತಿಹಳ
ಅಂದೆಲ್ಲವನು ಮೀರಿ ಕಾಡಿ ಬೇಡುವ ಸತಿಯು
ಗಂಡುತೊತ್ತಿನ ಸಂಗವಭಿಮಾನ ಭಂಗ ||

ಒಂದು ತಂದರೆ ಮನೆಗೆ ಹತ್ತೆಂದು ಭಾವಿಸದೆ
ತಂದರೆ ಹತ್ತು ಮನೆಲೊಂದು ಮಾಡಿ
ಇಂದೇನಿಲ್ಲವೊ ಎಂದು ಮುಖ ಮೂರು ಕಡೆ ತಿರುವಿ-
ಕೊಂಡು ಹೋಗುವ ನಾರಿ ದೊಡ್ಡ ಬಕಮಾರಿ ||

ಮಕ್ಕಳಿಗೆ ಕೊಡಲಿಲ್ಲ ಮರಿಗಳಿಗೆ ಇಡಲಿಲ್ಲ
ನಾಲ್ಕುವರೆ ಬಣ್ಣ ಭಂಗಾರವಿಲ್ಲ
ಚಿಕ್ಕವಳು ನಿನ್ನ ಕೈಪಿಡಿದು ಕೆಟ್ಟೆನೆಂಬ
ಮುಕ್ಕು ತೊತ್ತೆಯ ಸಂಗವಭಿಮಾನ ಭಂಗ ||

ತಾಯ ಹೊರಡಿಸು ತಂದೆ ಮೊದಲೆ ದಾಯಾದ್ಯರ
ಮಾಯೆಯನು ಬಿಡು ನಿನಗೆ ಬೇಕಾದರೆ
ನ್ಯಾಯದಲಿ ಬೇರೆ ಮನೆಯನು ಕಟ್ಟು ಎಂದೆಂಬ
ಮಾಯಗಾತಿಯ ತೊತ್ತು ಹೆಡತಲೆಯ ಮೃತ್ಯು ||

ಅಣ್ಣ ತಮ್ಮಂದಿರಾ ಹೆಣ್ಣು ಒಡಹುಟ್ಟಿದರ
ಇನ್ನು ಬಿಡು ನಾ ನಿನಗೆ ಬೇಕಾದರೆ
ಬಿನ್ನಣೆಯ ಮಾತಾಡಿ ಕ್ಲೇಶಬಡಿಪಳ ಬಿಡಿಸಿ
ಚೆನ್ನ ಶ್ರೀಪುರಂದರವಿಠಲ ದಯಮಾಡೋ ||
***

pallavi

pati bhakuti illatiha satiya sanga vrata keTTu sukha paDeyalillavO ranga

caraNam 1

gaNDa bandare eddu nillade mancada lEle candadali kuLitu mAtADutihaLa
andellavanu mIri kADi bEDuva satiyu gaNDu tottina sangavabhimAna bhanga

caraNam 2

ondu tandare manege hattendu bhAvisade tandare hattu manalondu mADi
indEnillavo endu mukha mUru kaDe tiruvi koNDu hOguva nAri doDDa pagavAri

caraNam 3

makkaLige koDlilla marigaLige iDalilla nAlkuvare baNNa bhangAravilla
cikkavaLu ninna kai piDidu keTTanu emba mukku totteya sangavabhimAna bhanga

caraNam 4

tta horaDisu tande modale tAyAdyara mAyeyanu biTu ninage bEkAdare
nyAyadali bEre maneyanu kaTTu endemba mAyagAdiya tottu heDa taleya mrtyu

caraNam 5

aNNa tammandirA heNNu oDahuTTidara innu biDu nA ninage bEkAdare
binnaNeya mAtADi klEshabaDipaLa biDisi cenna shrI purandara viTTala dayamADO
***

ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತಗೆಟ್ಟು 
ಸುಖ ಪಡೆಯಲಿಲ್ಲವೊ ರಂಗ ಪ.

ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿಕಂಡಾಡಿ ಏಕವಚನಂಗಳನಾಗಅಂಡಲೆದು ಮಾರ್ಮಲೆಂದು ಕಾಡಿಬೇಡುವ - ಇಂಥಭಂಡುದೊತ್ತಿನ ಕೂಟ ಏಳುನಾಗರ ಕಾಟ 1

ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆತಂದರೆ ಹತ್ತು ಮನೆಯೊಳಗೊಂದ ಮಾಡಿಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದದಿಂದ ಹೋಹಳು ನಾರಿ ಬಹು ದೊಡ್ಡಮಾರಿ2

ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬಮೂರ್ಖ ತೊತ್ತಿನ ಸಂಗ ಕುಲಕೆಲ್ಲಭಂಗ3

ತಾಯನು ಹೊರಡಿಸು ತಂದೆಯನು ತೆರಳಿಸುದಾಯಾದಿಯನು ಮನೆಯಲಿರಿಸಬೇಡಬಾಯಿನ್ನುಮನೆ ಕಟ್ಟಿ ಬೇರಿರುವ ನಾವೆಂಬಮಾಯಾಕಾತಿಯ ಸಂಗ ಅಭಿಮಾನಭಂಗ4

ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದುಕಷ್ಟ ಸೆರೆಯೆನುವೆನೆ ಈ ಪರಿಯಲಿಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀಪುರಂದರವಿಠಲ ಪಶ್ಚಿಮದ ರಂಗಧಾಮ 5
********