Showing posts with label ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷಶಾಯಿಯೆ ನಾ ಕಾಣದೇ ಮಾಡಿದ vaikunta vittala. Show all posts
Showing posts with label ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷಶಾಯಿಯೆ ನಾ ಕಾಣದೇ ಮಾಡಿದ vaikunta vittala. Show all posts

Sunday, 1 August 2021

ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷಶಾಯಿಯೆ ನಾ ಕಾಣದೇ ಮಾಡಿದ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷ

ಶಾಯಿಯೆ ನಾ ಕಾಣದೇ ಮಾಡಿದ ದುಷ್ಕರ್ಮಂಗಳಿಗೆ ಪ


ತಿರುಮಲೆಯಂತೆ ನಾ ಮಂಚದುರುಗನಿಂಬುಗೊಂಡು ಕ

ರ್ಪುರದ ವೀಳಯದ ಮಡುಪುಗಳನೇ ಕೊಟ್ಟು

ಮರಳಿ ನಿದ್ರೆಯ ಮಾಡುವಾ ಪರಿಯಂತ ಕಾಲನೊತ್ತುತ

ಲಿರುತಿರ್ದು ಪರಿದು ಎನ್ನ ನೆರೆಪಾತಕನಾಗಿ ಮಾಡಿದುದಕೇ 1


ಕಡಲಶಯನ[ನ]ನೇಕ ಕೋಟಿ ಕಮಲಭವಾಂಡ

ಕೊಡೆಯನೆ ಕಾಮಪಿತನೇ ಸರ್ವೋತ್ತಮನೇ ನಾ

ಕುಡಿದು ಮಿಕ್ಕ ಹಾಲ ನೀ ಕುಡಿದು ಯೆನ್ನಾ ಪಾಪದೊಳು

ಕೆಡಹಿ ಬಹಳ ಯಾತನೆ ಬಡಿಸೀ ಕೆಡಿಸಿದುದಕೇ 2


ಗುರುಶಿಷ್ಯರುಗಳು ಸ್ವಾಮಿ ಭೃತ್ಯರುಗಳು ದಂಪತಿಗಳೆಂಬೀ

ಪರಿಯ ತಾರತಮ್ಯಂಗಳೊಂದಿಲ್ಲವೇ ಹರೀ

ಶರಣವತ್ಸಲನೇ ವೇಲಾಪುರದ ವೈಕುಂಠಕೇಶವ

ನರನ ಪಾಮರನ ದುರಿತಶರಧಿಯ ದಾಂಟಿಸುವುದಕೇ 3

***