Showing posts with label ಪಂಚಭೇದತಿಳಿವದು ಪ್ರತಿದಿನದಲೀ pranesha vittala. Show all posts
Showing posts with label ಪಂಚಭೇದತಿಳಿವದು ಪ್ರತಿದಿನದಲೀ pranesha vittala. Show all posts

Wednesday 13 November 2019

ಪಂಚಭೇದತಿಳಿವದು ಪ್ರತಿದಿನದಲೀ ankita pranesha vittala

by ಪ್ರಾಣೇಶದಾಸರು
ಪಂಚಭೇದತಿಳಿವದು ಪ್ರತಿದಿನದಲೀ |ಮುಂಚಿನಜ ಮಧ್ವಮುನಿ ಮತವನುಸರಿಸಿದವರೂ ಪ

ಜೀವೇಶರಿಗೆ ಭೇದ ಜೀವ ಜೀವಕೆ ಭೇದ |ದೇವರಿಗು ಜಡಕು, ಜಡಕೆ ಜಡ ಭೇದಾ ||ಆವಾಗಜೀವರಿಗೆ ಜಡಗಳಿಗೆ ಭೇದುಂಟು |ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ 1

ಈಶನಿತ್ಯಅನಾದಿಸ್ವರತಸರ್ವಗ ಸ್ವಪ್ರ- |ಕಾಶ ಸರ್ವಜÕವಿಶ್ವವಿಲಕ್ಷಣಾ ||ಮೇಶ ಅಪರಿಚ್ಛಿನ್ನಮೂರ್ತಿಪ್ರಾಣಿಗಳಿಂದ |ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ 2

ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||ಆಮಯವಿದೂರ ಜ್ಞಾನಾನಂದ ಬಲ ಪೂರ್ಣ |ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ 3

ಸುಖ ದುಃಖಭೋಗಿಜೀವನು ಅಸ್ವತಂತ್ರ ಬಹು |ಕಕುಲಾತಿಉಳ್ಳವನು ದುರ್ವಿಷಯದೀ ||ಲಕುಮೀಶನಲ್ಲಿ ಭಕ್ತಿ ವಿವರ್ಜಿತನುಪ್ರತಿಕ್ಷ- |ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು 4

ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |ಮಾಧವನ ಬಂಧಕ ಶಕುತಿಯೊಳಗಿಹ್ಯಾ ||ತಾ ಧರಿಸಿಹನುಪ್ರಾಕೃತಪ್ರಾಕೃತಾವರಣ |ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ 5

ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |ಯಂದು ಭೇದಗಳುಂಟವರ ಲಕ್ಷಣಾ ||ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು 6

ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ 7

ವಿಧಿಮೊದಲು ತೃಣ ಜೀವಪರಿಯಂತಸಾತ್ವಿಕರು |ಇದರೊಳಗೆ ದೇವ, ಋಷಿ, ಪಿತೃಪ, ನರರೂ ||ಸುಧಿಗೆ ಯೋಗ್ಯ ರಜಾದಿಗೀರ್ವಾಣಗಂಧರ್ವ |ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ 8

ಇವರಿಂದ ಭಿನ್ನ ರಾಜಸರು ಗೋ ಭೂ ನರಕ |ತ್ರಿವಿಧಗತಿಉಳ್ಳವರು ಪಂಚಭೇದಾ ||ವಿವರ ತರತಮ ದೇವರ ಮಹತ್ಮಿಯನು ಅರಿಯ |ದವರು ಲಿಂಗಕಳಿಯರುಧಾಮತ್ರಯಪೊಗದವರೂ 9

ಸಂಸಾರಿಗಳಿಗೆ ಭಿನ್ನರು ತಮೋಗುಣದವರು |ಕಂಸಾರಿಯಲಿ ದ್ವೇಷವರ ಸ್ವಭಾವಾ ||ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |ಕ್ಷಸರು, ಪಿಶಾಚರವರನುಗರು, ನರಾಧಮರು 10

ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||ಜ್ಞಾನಿಭೇದವನರಿಯ ಪಂಚ ಮಹಾಪಾತಕಿ ಪು- |ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ 11

ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |ಕುಜನರಿಗನೇಕ ಬಗೆ ಸಹಯವಹನೂ ||ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |ವೃಜನವನ ವಪು ತಾಯಿ ತಂಗಿಯಂಬರನರಿಯ 12

ಬವರಬಂಗಾರ ದ್ಯೂತಾ ಪೇಯಅನೃತನಟ |ಯುವತಿಯೀಯಾರು ಸ್ಥಳ ನಿಲಯವವರಿಗೆ ||ನವವಿಧ ದ್ವೇಷಿಗಳಿಗಾಕಾರನೆನಿಸುವನು |ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ 13

ಆ ನೀಚನ ಮಲಮೂತ್ರ ವಿಸರ್ಜನದಿಘೋರ|ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||ಕ್ಷೋಣಿಯೊಳವನ ನಿಂದೆ ನಿರುತದಲಿ ಮಾಡುವದೆ |ಶ್ರೀನಾಥನರ್ಚನೆ ಮಹಾಯಜÕವೆನಿಸುವದು 14

ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||ಮೂವರಿಗೆ ಪಾಪಮಿಶ್ರಿತಕರ್ಮಪುಣ್ಯ ಬಹು |ನೋವು ಸ್ವರ್ಗ ನರಕ ಸುಮೋಕ್ಷಾದಿಗತಿಉಂಟು 15

ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |ನೈಜವಾಯಿತು ಭೇದ ಜೀವ ಜಡಕೇ ||ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ,ನಿತ್ಯ|ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ 16

ಪ್ರಾಕೃತವಿಕೃತ ವೈಕೃತತ್ರಯ ಅಸ್ಥಿರ ಜಡವು |ಪ್ರಾಕೃತವಜಾಂಡ ಧೊರ ಆವರಣವೂ ||ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು 17

ಸರಸಿಜಭವಾಂಡದೊಳಿಹ ನೆಲಜಲಧಿಗಿರಿಗಳು |ಎರಡೇಳುಭುವನವೈಕೃತ ಜಡವಿದೂ ||ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ 18

ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |ಜಾಲಕಾರಣತ ಸುಸ್ಥಿರವೆನಿಪವೂ ||ಮ್ಯಾಲೆ ಅದರಿಂದಾದ ತತ್ವಗಳನಿತ್ಯಮಹ |ಕಾಲವೆಂದಿಗ್ಯುನಿತ್ಯಅಣುಕಾಲಗಳ ನಿತ್ಯಾ19

ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |ರಾಗಿರಲು ಜಡ ಜಡಕೆ ಭೇದ ಸಿದ್ಧಾ ||ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ20

ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |ದೂ ಕೆಡದೆ ಸುಖಕಾಂತಿ ಯುಕ್ತವಾದಾ ||ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |ಶೋಕಪೂರಿತವಾದನಿತ್ಯನರಕಗಳಿಹವು 21

ಈಪಂಚಭೇದಜ್ಞಾನಿಲ್ಲದವ ಶ್ರೀ ಮುದ್ರಿ |ಗೋಪಿಚಂದನ ಧರಿಸಿದರು ಫಲವೇನೂ ||ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ 22

ಹರಿಗುರುಗಳ ದಯ ಪಡೆವರಿಗೆರುಚಿತೋರ್ವದಿತ |ರರಿಗೆ ಈ ಕೃತಿಯುಕರ್ಣಕಠೋರವೂ ||ತರಣಿಬರೆ ಸರ್ವರಿಗೆ ಘೂಕಗಾದಂತೆ ಇದು |ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು 23

ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |ಸಾನುರಾಗದಲಿಹರಿಸರ್ವೋತ್ತುಮಾ ||ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |ಕಾಣರು ಕು ಸಂಸಾರ ಧಾಮತ್ರ ವೈದುವರು 24

ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |ಒಪ್ಪುತಿಹ ಈ ಪಂಚಭೇದವನ್ನೂ ||ತಪ್ಪದಲೆನಿತ್ಯಪಠಿಸುವರ ಪೊರವವನು ಬೊಮ್ಮ- |ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ 25
***


pancaBEda tiLivadu pratidinadalI |
muncinaja madhvamuni matavanusarisidavaru || pa ||

jIvESarige BEda jIva jIvake BEda |
dEvarigu jaDaku, jaDake jaDa BEdA ||
AvAga jIvarige jaDagaLige BEdunTu |
I vivarava pELve yannApanitu kELuvadU || 1 ||

ISa nitya anAdi svarata sarvaga svapra- |
kASa sarvaj~ja viSva vilakShaNA ||
mESa aparicCinna mUrti prANigaLinda |
tA sAkShiyAgi bahu karmagaLa mADisuva || 2 ||

SrI muKa jagatyakutpatyAdi kAraNa ma- |
hA mahima sarvataMtra svatantrA ||
Amaya vidUra j~jAnAnanda bala pUrNa |
sImeyillada suguNa kriyAtmaka svarUpa || 3 ||

suKa duHKa BOgi jIvanu asvatantra bahu |
kakulAti uLLavanu durviShayadI ||
lakumISanalli Bakti vivarjitanu prati kSha- |
Nake anaMta aparAdhi janma mRuti uLLavanu || 4 ||

Adi vyAdhigaLinda pIDitanu aj~jAni |
mAdhavana baMdhaka SakutiyoLagihyA ||
tA dharisihanu prAkRuta prAkRutAvaraNa |
BEdave siddha yintha jIvagU harigyU || 5 ||

oMdalla sarva jIvaru satva raja tamaru |
yandu BEdagaLunTavara lakShaNA ||
mundina padadi pELve sajjanaru kELiyA- |
nanda baDalendu vinayadali binnaisuvenu || 6 ||

Cinna Baktaru yaniparella dEvatigaLa |
cCinna Baktaru vidhIravarheMDarU ||
cannAgi mudadi I nirjarara taratamya |
vannu kELikobEku j~jAnigaLa muKadinda || 7 ||

vidhi modalu tRuNa jIva pariyaMta sAtvikaru |
idaroLage dEva, RuShi, pitRupa, nararU ||
sudhige yOgya rajAdi gIrvANa gandharva |
tudiyAgi sAMSaru niraMSaruLidavarella || 8 ||

ivarinda Binna rAjasaru gO BU naraka |
trividha gati uLLavaru pancaBEdA ||
vivara taratama dEvara mahatmiyanu ariya |
davaru liMgakaLiyaru dhAmatraya pogadavarU || 9 ||

saMsArigaLige Binnaru tamOguNadavaru |
kaMsAriyali dvEShavara svaBAvA ||
A surArigaLu nAlku prakAra daitya rA |
kShasaru, piSAcaravaranugaru, narAdhamaru || 10 ||

I nAlku bageya surarige arasu kaliyavanA |
hInatanaveShTuccarisali mithyA ||
j~jAni BEdavanariya paMca mahApAtaki pu- |
rANa vEdagaLige viruddhArtha kalpisuvA || 11 ||

sujanarAcaraNe naDiyaguDa duHKa baDisuva |
kujanariganEka bage sahayavahanU ||
prajagaLana rOganA vRuShTiyiM daNisuvanu |
vRujanavana vapu tAyi tangiyaMbaranariya || 12 ||

bavara bangAra dyUtA pEya anRuta naTa |
yuvatiyIyAru sthaLa nilayavavarige ||
navavidha dvEShigaLigAkAranenisuvanu |
avana sama pApigaLu mUru lOkadalilla || 13 ||

A nIcana malamUtra visarjanadi GOra |
kAnanadi kattaliyoLage smaripudU ||
kShoNiyoLavana ninde nirutadali mADuvade |
SrInAthanarcane mahAyaj~javenisuvadu || 14 ||

I vidhadi mUru guNadinda paraspara jIva |
jIvarige BEda yOgyati prakArA ||
mUvarige pApamiSrita karma puNya bahu |
nOvu svarga naraka sumOkShAdi gati unTu || 15 ||

I jIvarige uLLanuBava jaDagaLigilla |
naijavAyitu BEda jIva jaDakE ||
A jaDa tri, nityA anityanityA, nitya |
mAjadavu avyAkRuta naBaSRuti varNagaLU || 16 ||

prAkRuta vikRuta vaikRutatraya asthira jaDavu |
prAkRutavajAnDa dhora AvaraNavU ||
svIkRutaivattu kOTyOjana suvarNAtma |
kAkramisihadajAnDakidu vikRuta jaDavendu || 17 ||

sarasija BavAnDadoLiha nela jaladhi girigaLu |
eraDELu Buvana vaikRuta jaDavidU ||
sthira asthira jaDatraya vidha purANagaLartha |
irutihavu acalAgi SabdagaLa nityA || 18 ||

mUla prakRutigata trividhAnanta paramANu |
jAla kAraNata susthiravenipavU ||
myAle adarindAda tatvagaLa nitya maha |
kAlaveMdigyu nitya aNukAlagaLa nityA || 19 ||

hIge mUru vidha jaDa ondonde mUru mU- |
rAgiralu jaDa jaDake BEda siddhA ||
BAgAra mADi guNarUpa krayadi nODe |
nAgArivahage jaDagaLige BEdavE satyA || 20 ||

I kamalajAnDavu anityavidaroLage eM- |
dU keDade suKakAnti yuktavAdA ||
SrIkaLatrana tridhAmagaLu kukalige takka |
SOkapUritavAda nitya narakagaLihavu || 21 ||

I pancaBEda j~jAnilladava SrI mudri |
gOpichandana dharisidaru PalavEnU ||
I poDaviyoLu vEShadhArigaLu jIvisare |
A pariya BAsa vaiShNavanendariyabEkU || 22 ||

harigurugaLa daya paDevarige ruci tOrvadita |
rarige I kRutiyu karNa kaThOravU ||
taraNi bare sarvarige GUkagAdante idu |
bariya mAtalla SAstrake sammatAgihadu || 23 ||

hInaroLu beriyadale pancaBEdava tiLidu |
sAnurAgadali hari sarvOttumA ||
prANadEvare gurugaLendaritu Bajisuvaru |
kANaru ku saMsAra dhAmatra vaiduvaru || 24 ||

ippattaidu padagaLinda sangatiyAgi |
opputiha I pancaBEdavannU ||
tappadale nitya paThisuvara poravavanu bomma- |
nappa SrI prANESa viThalanihaparadalli || 25 ||
***