ಪ್ರಾಣದೇವ ನೀ ಕಾಯೊ ಕರುಣಿ ಸತತ
ಪಾಲಿಸು ಸುಖದಾತ ಪ.
ಪ್ರಣಾಪಾನವ್ಯಾನೊದಾನತೋಷ
ಸಮಾನ ಭಾರತೀಶ ಅ.ಪ.
ತ್ರಿವಿಧ ಜೀವರ ಶ್ವಾಸ ನಿಯಾಮಕನೆ ಶ್ರೀ ಹರಿ ಸೇವಕ ನೀನೆ
ಭವ ಇಂದ್ರಾದಿಗಳಿಂದಲಿ ವಂದಿತನೆ ಭಾರತಿಗತಿ ಪ್ರಿಯನೆ
ತ್ರಿವಿಧ ಶ್ವಾಸ ಜಪ ನಿರ್ಲಿಪ್ತದಿ ಜಪಿಸಿ ಜೀವರ ಗತಿಗೈಸಿ
ನವವಿಧ ಭಕ್ತಿಯ ಹರಿಚರಣದಿ ನಿರುತ ಚರಿಸುವ ಮತಿದಾತ 1
ತತ್ವಾಧೀಶರ ಪ್ರೇರಕ ಮಹಪ್ರಾಣ ಜೀವರ ಸುತ್ರಾಣ
ವ್ಯಾಪ್ತಜಗದಿ ಶ್ರೀ ಹರಿ ಲಕುಮಿಯ ಸಹಿತ ಬಳಿತ್ಥಾ ಸೂಕ್ತ ಸ್ತುತ
ತತ್ವಾದಿಗಳಿಗಧೀಶ ಪೋಷತೋಷ ಶ್ರೀ ಹರಿ ನಿನ್ನೊಳು ವಾಸ
ಸತ್ವ ಗುಣದ ಜೀವರ ಸದ್ಗತಿದಾತ ಸುe್ಞÁನ ಪ್ರದಾತ 2
ತ್ರೇತೆಯಲ್ಲಿ ಶ್ರೀ ರಾಮದಾಸ್ಯ ಚರಿಸಿ ದಶಶಿರನನು ಮುರಿಸಿ
ಮಾತೆ ಕೊಟ್ಟ ಭಿಕ್ಷಾನ್ನ ಉಂಡು ಸುಖಿಸಿ ಬಕ ಹಿಡಿಂಬಕರೊರಸಿ
ಪಾತಕಿ ಮಾಯವಾದಿ ಜೈಸಿ ಸದ್ಗ್ರಂಥವ ರಚಿಸಿ
ಖ್ಯಾತ ಗೋಪಾಲಕೃಷ್ಣವಿಠ್ಠಲ ಪ್ರಿಯ ನಮೋ ಚಳ್ಳಕೆರೆನಿಲಯ 3
***