Showing posts with label ಡಂಬಕದ ಭಕುತಿಯನು ಬಿಡು ಕಂಡ್ಯ ಮನವೆ mohana vittala DHAMBAKADA BHAKUTIYANU BIDU KANDYA MANAVE. Show all posts
Showing posts with label ಡಂಬಕದ ಭಕುತಿಯನು ಬಿಡು ಕಂಡ್ಯ ಮನವೆ mohana vittala DHAMBAKADA BHAKUTIYANU BIDU KANDYA MANAVE. Show all posts

Sunday, 7 November 2021

ಡಂಬಕದ ಭಕುತಿಯನು ಬಿಡು ಕಂಡ್ಯ ಮನವೆ ankita mohana vittala DHAMBAKADA BHAKUTIYANU BIDU KANDYA MANAVE



by ಮೋಹನದಾಸರು 

ಡಂಬಕದ ಭಕುತಿಯನು ಬಿಡು ಕಂಡ್ಯ ಮನವೆ 
ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು          ।।ಪ।।

ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆ
ಐಹಿಕ ಫಲವಲ್ಲದೆ ಮೋಕ್ಷವುಂಟೆ?
ವಿಹಿತಾವಿಹತವ ತಿಳಿದು ಸತ್ಕರ್ಮ ಕಿಂಚಿತು ಮಾಡೆ 
ದಹಿಸುವುದು ಅಘರಾಶಿ ಅಹಿಶಾಯಿ ಒಲಿವ          ।।೧।।

ವರ ವೈಷ್ಣವರು ಬಂದು ನಿಲಲು ವಂದಿಸದಲೆ 
ಹರಿ ಪೂಜೆ ಮಾಳ್ವೆನೆಂದು ಕುಳಿತುಕೊಂಬೆ 
ಅರಿಯದ ಊರೊಳಗೆ ಅಗಸರ ಮಾಳಿಯೇ 
ಹಿರಿಯ ಮುತ್ತೈದೆಯು ಎಂದು ಕರೆಸುವಂತೆ          ।।೨।।

ಜಪವ ಮಾಡುವನೆಂದು ಮುಸಕನಿಟ್ಟು ಕುಳಿತು 
ತಪಿಸುವ ಒಳಗೆ ನೀ ಧನದಾಸೆಯಿಂದ 
ಕುಪಿತ ಬುದ್ಧಿಯ ಬಿಟ್ಟು ಮಹೋನ್ನ ವಿಠ್ಠಲನ 
ಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ        ।।೩।।
****
ರಾಗ : ಕಾಂಬೋದಿ  ತಾಳ : ಝಂಪೆ (raga, taala may differ in audio)

ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ ಪ


ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ಅ.ಪ.


ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆದಹಿಸುವುದು ಅಘರಾಶಿ ಅಹಿಶಾಯಿ ಒಲಿವ 1

ವರ ವೈಷ್ಣವರು ಬಂದು ನಿಲಲು ವಂದಿಸದಲೆಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆಅರಿಯದ ಊರೊಳಗೆ ಅಗಸರ ಮಾಳಿಯೇಹಿರಿಯ ಮುತ್ತೈದೆಯು ಎಂದು ಕರೆಸುವಂತೆ 2

ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತುತಪಿಸುವೆ ಒಳಗೆ ನೀ ಧನದಾಸೆಯಿಂದೆಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ 3

***