susheelendra teertha rayara mutt yati 1926 stutih
ಶ್ರೀ ಶ್ಯಾಮಸುಂದರದಾಸರು....
ರಾಗ : ದರ್ಬಾರಿ ಕಾನಡ ತಾಳ : ರೂಪಕ
ಗುರು ಸುಶೀಲೇಂದ್ರರ
ಚರಣ ವಾರಿಜಯುಗ್ಮ ।
ಸ್ಮರಿಸುವ ನರರು
ಶ್ರೀ ಹರಿದಾಸರೂ ।। ಪಲ್ಲವಿ ।।
ಹರಿವಾರ ಸುಮತಾಬ್ಧಿ
ಹರಿಣಾಂಕರೆನಿಸಿದ ।
ವರ ಸುಕೃತೀಂದ್ರ ತೀರ್ಥರ
ಕರ ಕಮಲಜ ।। ಅ ಪ ।।
ಕಡೆಯ ಆಶ್ರಮವ
ಕೈಕೊಂಡು ಮಾಸತ್ರಯದಿ ।
ಸಡಗರದಲಿ ಮಹಾ
ಸಭೆ ನಿರ್ಮಿಸಿ ।
ಪೊಡವಿಯೊಳಿದ್ದ ಭೂಸುರ-
ರಾಜ್ಞಾ ಪತ್ರದಿ ಬರ-
ಮಾಡಿ ವಿದ್ವಾಂಸರ
ಒಡಗೂಡಿ ಮಧ್ವಾಗಮನವನು ।
ನೋಡಿ ಬೆಲೆಯುಳ್ಳ
ವೆಗ್ಗಳ ಒಡವೇ ।
ಉಡುಪುಗಳನ್ನು ಕರುಣಿಸಿ
ಮೃಷ್ಟಾನ್ನ ದ್ವಿಜರಿಗೆ ।
ಕಡು ಸುಪ್ರೇಮದಿ
ಸಲಿಸಿ ಮುದ ಬಡಿಸಿ ।
ಜಡಕು ಮಾಯ್ಗಳ ಗಡಣ
ಜಡಧಿಗೆ ವಡವ ತಾನೆನಿಸಿ ।
ಕ್ರೋಡಜಾಸ್ಥಿತ ಒಡೆಯ
ಶ್ರೀ ಗುರುರಾಘವೇಂದ್ರರ ।
ಅಡಿಗಳಾಬ್ಜ ಕಾರಡಿಯಂತೊಪ್ಪುತ ।
ಬಿಡದೆ ಸಂತತ ದೃಢದಿ ಸೇವಿಸಿ ।
ಜಡಜಜಾಂಡದಿ
ಮೆರೆದ ಅಸ್ಮದ್ ।। ಚರಣ ।।
ಮರುತಾಂತರ್ಗತ ಮೂಲ
ತರಣಿ ಕುಲೇಂದ್ರನ ।
ಕರುಣವೆಷ್ಟಿವರೊಳು
ಅರುಹಲಾರೆ ।
ವರ ರೌಪ್ಯಾಸನಪುರಕೆ
ಎರುಡಾರು ಯತಿಗಳ ವತಿಯಿಂದ ।
ತಮ್ಮಯ ಶಿಷ್ಯ ತತಿಯಿಂದ
ಬಹುವಿಧ ಬಿರುದಾವಳಿಯಿಂದ ।
ತೆರಳಿ ಶಶಿರವಿ ವರಸುವಾದ್ಯ
ಧ್ವಾನ ಮೊಳಗಿಸುತ್ತಾ ।
ಘನ ಭಕುತಿ ಪರವಶರಾಗಿ
ಸುರಶಿರ ಕನಕವಣಿ
ಧನ ತನು ಮನ ತ್ವರಿತ ।।
ತೃಣ ಬಗೆದು ದೇವಕೀ
ತರುಳ ರುಕ್ಮಿಣೀ
ವರ ಮೂರಾಂತಕ ।
ಚರಣಕರ್ಪಿಸುತ
ಆನಂದ ಬಡುತ ।
ಸರ್ವ ಮುನಿಜನಗಳಿಗೆ
ಬಹು । ಉಪ ।
ಚರಿಸಿ ಮನ್ನಣೆ
ಧರಿಸಿ ಹರುಷದಿ ।
ವರ ಸುಧೀಂದ್ರ ಕರಜರನು ।
ನೆರೆ ಸ್ಥಾಪಿಸಿದ
ಆಶ್ಚರ್ಯ ಚರಿತ ।। ಚರಣ ।।
ಕ್ಷಿತಿಯೊಳು ಭಾರತೀ
ಪತಿ ಉಕ್ತ ಶಾಸ್ತ್ರಾರ್ಥ ।
ಚತುರತನದಿ ಪಡೆದು
ವಿತತ ಮಹಿಮಾನಾದ ।
ಪತಿತ ಪಾವನ
ಶ್ಯಾಮಸುಂದರನ ।
ಸ್ತುತಿಸುತಲಿಯ ಚಿಂತನ
ಗೈಯುತ ಶ್ರೀಯುತ ಸಂಸ್ಥಾನ ।
ಮತಿ ವಿಶಾರದರಾದವರ
ಸುವ್ರತೀಂದ್ರ ತೀರ್ಥರಿಗೆ ।
ಹಿತದಿಂದ ಒಪ್ಪಿಸಿ ಯತಿ
ಧೀರೇಂದ್ರರ ಚಾರು ಸ್ಥಳದೊಳಗೆ ।
ತನುವಿಟ್ಟು ಹರಿಪುರ ಪಥವ
ಪಿಡಿದೈದಿದರು ಚೆನ್ನಾಗಿ ಸೇವಿಪ ಜನರಿಗೆ ।
ಅತಿಶಯದಿ ಮನೋರಥವ
ನೀಡುತ ।ಸತತ ಮಾಣದೆ ಪರಮ ಭಕುತಿಲಿ ।
ಪೃಥ್ವಿ ಸುರಕರಶತದಳಗಳಿಂ
ನುತಿಸಿಕೊಳತರ್ಚನೆಯಗೊಂಬ ।। ।। ಚರಣ ।।
****