ಅದ್ಭುತ ಕೃತಿ
ಕಲಿಮುಖ್ಯ ದೈತ್ಯರನು ಸ್ಮರಿಸು ಬಿಡದೇ
ಕಲುಷವರ್ಜಿತ ಭಾಗವತರ ಮರೆಯದಲೆ
ಮಲಮೂತ್ರಗಳ ವಿಸರ್ಜನೆಯ ಗೈವಾಗ ಎಂ
ಜಲ ಕೈಯ ಬಾಯದೊಳದು ಉಗುಳುವಾಗ
ಹುಳಿಬೀಜ ಕವಡಿ ಪಗಡಿಗಳಾಡುವಾಗ ಮ
ಕ್ಕಳನಾಡಿಸುತಲಿ ವಿಸ್ಮರಣೆ ಇರುವಾಗ
ಸಂಧಿಕಾಲದಿ ಸತಿಯೊಡನೆ ಪವಡಿಸಿದಾಗ
ನಿಂದ್ಯ ಕರ್ಮಗಳನಾಚರಿಸುವಾಗ
ತಂದೆತಾಯ್ಗಳ ದಿವಸ ಮರದು ಬಿಟ್ಟಾಗ
ಕರ್ಮದಿ ಭಿಕ್ಷಕೆ ಬರಲು ಇಲ್ಲವೆಂಬಾಗ
ಪ್ರಾಯ ಧನಮದದಿಂದ ಹೇಯವಿಷಯಗಳು ಪಾ
ದೇಯವೆಂದರಿದು ಸೇವಿಸುವಾಗ
ತಾಯಿತಂದೆಗಳ ದುಗ್ಗುಣಗಳೆಣಿಸುವಾಗ
ಜಾಯಾತ್ಮಜಗೇಹಾದಿಗಳು ಎನ್ನದೆಂಬಾಗ
ಮತಿವಂತರೊಡನೆ ಮತ್ಸರ ಪುಟ್ಟದಾಗ
ನರ್ಪಿತ ಪದಾರ್ಥಗಳ ಭಕ್ಷಿಸುವಾಗ
ಮೃತವತ್ಸಗೋವುಗಳ ಪಾಲನುಂಬಾಗ
ಶ್ರೀಪತಿ ಜಗನ್ನಾಥವಿಠಲನ ಸ್ಮೃತಿ ಬಿಟ್ಟಾಗ.....
*****