ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ
ಲಾಲಿ ರಾಮಕೃಷ್ಣ ವ್ಯಾಸರ ಪ್ರೀಯ ||ಪ||
ಮೂಜಗದಲಿ ನೀ ಬಾಲ ಬ್ರಹ್ಮಚಾರಿ
ಈ ಜಗದಲಿ ಕಪಿ ರಾಜ್ಯವನಾಳಿ
ತೇಜಮುತ್ತಿನ ಕವಚ ಕುಂಡಲಧಾರಿ
ಪೂಜಿಪರ ಪಾಲಿಪೆ ಸುಜನರುಪಕಾರಿ ||೧||
ಭೂಮಿ ಭಾರವನಿಳುಹೆ ಬಂದೆ ಕಲಿಭೀಮ
ಕಾಮಿ ಕೀಚಕರನ್ನು ಕುಟ್ಟಿ ರಣಧಾಮ
ಭಾಮಿನಿ ದ್ರೌಪದಿ ಕಷ್ಟನಿರ್ಧೂಮ
ಕಾಮಿತಾರ್ಥಗಳಿತ್ತು ಸಲಹೋ ನಿಸ್ಸೀಮ ||೨||
ಸೌಂದರ್ಯರೂಪದ ಶ್ರೀಮದಾನಂದ
ತಂದೆ ಹಯವದನನ ಮೋಹದ ಕಂದ
ಬಂದು ಉಡುಪಿಯಲಿ ನೆಲೆಯಾಗಿ ನಿಂದ
ವಂದಿಸುವೆ ನಿದ್ರೆಗೈ ಹರಿಧ್ಯಾನದಿಂದ ||೩||
***
laali laali hanuma bhima madhvaarya
laali raamakrrishhNa vyaasara priya ||p||
mujagadali ni baala brahmachaari
ia jagadali kapi raajyavanaaLi
thejamuththina kavacha kumDaladhaari
pujipara paalipe sujanarupakaari ||೧||
bhumi bhaaravaniLuhe bamde kalibhima
kaami kichakarannu kuTTi raNadhaama
bhaamini draupadi kashhTanirdhuma
kaamithaarthhagaLiththu salaho nissima ||೨||
saumdaryarupada shrimadaanamda
thamde hayavadanana mohada kamda
bamdu uDupiyali neleyaagi nimda
vamdisuve nidregai haridhyaanadimda ||೩||
***