Showing posts with label ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ vasudeva vittala. Show all posts
Showing posts with label ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ vasudeva vittala. Show all posts

Wednesday, 1 September 2021

ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ ankita vasudeva vittala

 ..


kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ

ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ ಪ


ಜನನಿ ಜನಕ ಚಿಕ್ಕತನದಿಂದ ತನಗತಿ

ಮನಮುಟ್ಟಿ ವಿನಯದಿ ವಿನಿಯೋಗಿಸಿ

ಜನರೊಳು ಘನ ಧರ್ಮ ಧನ ಗಳಿಸಿದರಂತೆ

ಅನುಸ್ಮøತಿ ಎನಗಿನ್ನು ಇನಿತಿಲ್ಲವು ಪೇಳೆ 1


ಅಂದಿಂದಾತನ ಮೊಗ ಚಂದಾಗಿ ನೋಡಿಲ್ಲವೆ

ಒಂದು ಬಾರೆನ್ನ ತಾನು ಬಂದು ತೋರನೆ

ಮಂದಿ ಪೇಳುವದು ಕೇಳ್ಯಾನಂದಿಸುವೆನಲ್ಲದೆ

ಮುಂದೇನು ಗತಿಯೆಂದು ಇಂದುಮುಖಿಯೆ ಪೇಳೆ2


ದಿನಗಳೊದಗಿದವೆ ಜನರೆಲ್ಲ ಕಂಡಂತೆ

ಬಿನಗು ಮಾತುಗಳನು ಎನಗಂಬರೆ

ಎನಗೇನು ಇದರಿಂದ ತನಗೆ ಆ ಕೀರುತಿ

ಮನಮುಟ್ಟಿ ನೀ ಪೇಳೆ ವನಜಾಕ್ಷಗೆ ಸಖಿ3


ಪಿರಿಯ ಸತಿಯರಂತೆ ಪರಿ ಪರಿ ಭೂಷಣ

ಸರಿ ಬಂದರೆ ಉಪಚರಿಸುವಂತೆ

ದೊರಿಯರ ಸತಿಯರ ನರರ ದೃಷ್ಟಿಯ ಬಾಧೆ

ಪರಿಚಾರಕರಿಟ್ಟು ಪರಿಹರಿಸ ಪೇಳೆ 4


ಆ ಸುದತಿಯರನ್ನ ಲೇಸಾಗಿ ಭೋಗಿಸೆ ನಾ

ನಸೂಯ ಅದರಿಂದ ಲೇಶ ಮಾಡೆ

ವಾಸುದೇವವಿಠಲ ಈ ಸಮಯದಲಿ ಎನ್ನ

ತಾ ಸುಮುಖದಿಂದ ನೋಡೆ ನಾ ಸುಖಿ ಸಖಿಯೆ5

***