..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ
ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ ಪ
ಜನನಿ ಜನಕ ಚಿಕ್ಕತನದಿಂದ ತನಗತಿ
ಮನಮುಟ್ಟಿ ವಿನಯದಿ ವಿನಿಯೋಗಿಸಿ
ಜನರೊಳು ಘನ ಧರ್ಮ ಧನ ಗಳಿಸಿದರಂತೆ
ಅನುಸ್ಮøತಿ ಎನಗಿನ್ನು ಇನಿತಿಲ್ಲವು ಪೇಳೆ 1
ಅಂದಿಂದಾತನ ಮೊಗ ಚಂದಾಗಿ ನೋಡಿಲ್ಲವೆ
ಒಂದು ಬಾರೆನ್ನ ತಾನು ಬಂದು ತೋರನೆ
ಮಂದಿ ಪೇಳುವದು ಕೇಳ್ಯಾನಂದಿಸುವೆನಲ್ಲದೆ
ಮುಂದೇನು ಗತಿಯೆಂದು ಇಂದುಮುಖಿಯೆ ಪೇಳೆ2
ದಿನಗಳೊದಗಿದವೆ ಜನರೆಲ್ಲ ಕಂಡಂತೆ
ಬಿನಗು ಮಾತುಗಳನು ಎನಗಂಬರೆ
ಎನಗೇನು ಇದರಿಂದ ತನಗೆ ಆ ಕೀರುತಿ
ಮನಮುಟ್ಟಿ ನೀ ಪೇಳೆ ವನಜಾಕ್ಷಗೆ ಸಖಿ3
ಪಿರಿಯ ಸತಿಯರಂತೆ ಪರಿ ಪರಿ ಭೂಷಣ
ಸರಿ ಬಂದರೆ ಉಪಚರಿಸುವಂತೆ
ದೊರಿಯರ ಸತಿಯರ ನರರ ದೃಷ್ಟಿಯ ಬಾಧೆ
ಪರಿಚಾರಕರಿಟ್ಟು ಪರಿಹರಿಸ ಪೇಳೆ 4
ಆ ಸುದತಿಯರನ್ನ ಲೇಸಾಗಿ ಭೋಗಿಸೆ ನಾ
ನಸೂಯ ಅದರಿಂದ ಲೇಶ ಮಾಡೆ
ವಾಸುದೇವವಿಠಲ ಈ ಸಮಯದಲಿ ಎನ್ನ
ತಾ ಸುಮುಖದಿಂದ ನೋಡೆ ನಾ ಸುಖಿ ಸಖಿಯೆ5
***
No comments:
Post a Comment