..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ರಾಗ - : ತಾಳ -
ಎಂದಿಗೆ ನಿನ್ನ ಪಾದ ಕಾಂಬೆ ಸ್ವಾಮಿ l
ಎಂದಿಗೆ ನಿನ್ನ ಪಾದ ಕಾಂಬೆ ll ಪ ll
ಎಂದಿಗೆ ನಿನ್ನ ಪಾದ ಕಂಡೇ ಭಕುತಿಯಿಂದ l
ಅಂದಿಗೆ ಭವಪಾಶ ತುಂಡೆ ಸ್ವಾಮಿ ll ಅ ಪ ll
ಇಂದಿರದೇವಿ ನಿನ್ನ ಹೊಂದಿದ್ದ ಕಾರಣ l
ದ್ವಂದ್ವಔಘ ಕಾಣಲಿಲ್ಲ ಸ್ವಾಮಿ ll 1 ll
ಬೊಮ್ಮನು ನಿನ್ನ ಮಗ ನಮ್ಮಿ ನುತಿಸುವಾಗ ನಿನ್ನ l
ಮೊಮ್ಮಗ ಕುಣಿ ಕುಣಿದಾಡುವ ll 2 ll
ನಿನ್ನಾಣೆ ವಾಸುದೇವವಿಟ್ಠಲಾ ಎನ್ನ l
ಮನ್ನಾದಿ ಭಜಿಸುವ ಬಲ್ಲೆಲಾ ಸ್ವಾಮಿ ll 3 ll
***
ಎಂದಿಗೆ ನಿನ್ನ ಪಾದ ಕಾಂಬೆ ಸ್ವಾಮಿ
ಎಂದಿಗೆ ನಿನ್ನ ಪಾದ ಕಾಂಬೆ ಪ
ಎಂದಿಗೆ ನಿನ್ನ ಪಾದ ಕಂಡೆ ಭಕುತಿಯಿಂದ
ಅಂದಿಗೆ ಭವಪಾಶ ತುಂಡೆ ಸ್ವಾಮಿ ಅ.ಪ
ಇಂದಿರದೇವಿ ನಿನ್ನ ಹೊಂದಿದ ಕಾರಣ
ದಂದೂಗವನು ಕಾಣಲಿಲ್ಲ ಸ್ವಾಮಿ 1
ಬೊಮ್ಮನು ನಿನ್ನ ಪಾದ ನಮ್ಮಿ ತುತಿಸುವ ನಿನ್ನ
ಮೊಮ್ಮಗ ಕುಣಿ ಕುಣಿದಾಡುವ 2
ನಿನ್ನಾಣೆ ವಾಸುದೇವವಿಠಲ ಎನ್ನ
ಮನ್ನಾದಿ ಭಜಿಸುವ ಬಲ್ಲೆಲಾ ಸ್ವಾಮಿ 3
***
No comments:
Post a Comment