ಶ್ರೀ ಪಾವ೯ತೀದೇವಿ ಸುಪ್ರಭಾತ🙏
.
ಅಮ್ಮಾ ಏಳಮ್ಮಾಎನ್ನ ತಾಯೇ ಗೌರಮ್ಮಾ..ಪ
ಚಿನ್ಮಯ ಮೂರುತಿ ಹೆಮ್ಮೆಯ ನಮ್ಮ
ಬೊಮ್ಮನ ಸೊಸೆ ನೀ ಏಳಮ್ಮ..ಅ..ಪ
ಒಮ್ಮೆ ನೋಡಮ್ಮಾ ನಿನ್ನ ಕಂದನು ನಾನಮ್ಮಾ
ಗಮ್ಮನೆ ಕಂಪಿನ ಮಲ್ಲಿಗೆ ಸುಮವ
ನಲ್ಮೆಯಿಂದಲೀ ತಂದಿಹೆನಮ್ಮಾ..1
ನೇಸರ ನೋಡಮ್ಮಾ ನಿನ್ನ ದಾಸರು ಕಾದಿಹರಮ್ಮಾ
ಆಸೆಯಿಂದಲಿ ನಿನ್ನಯ ಪೂಜೆಗೆ
ಭೂಸುರ ವೃಂದವು ಬಂದಿಹುದಮ್ಮಾ..2
ಬೇಗನೆ ಏಳಮ್ಮಾ ಎನ್ನ ಮುದ್ದಿನ ಗಣಿಯಮ್ಮಾ
ನಾಗಭೂಷಣ ನನ್ನಪ್ಪ ಶಿವಪ್ಪನು
ಭಾಗವತ ಸಮ್ಮೇಳನ ದಿಂ ತುತಿಸುತಿಹರಮ್ಮಾ..3
ಸುಪ್ರಭಾತವ ಕೇಳಮ್ಮಾ ನಿನ್ನ ಶಿವಗಣ ಪಾಡ್ದನಾ
ಅಪ್ರಮೇಯ ಶ್ರೀಗುರುಪ್ರಿಯವಿಠಲನ
ಕ್ಷಿಪ್ರದಲಿ ಎನಗೆ ನೀ ತೋರಿಸಮ್ಮಾ..4
***