..
kruti: tandevaradagopala vittala (ಪ್ರಹ್ಲಾದಗೌಡರು)
ಭಕ್ತನಲ್ಲವೇ ನಾನು ಹರಿ ಪ
ಭಕ್ತನಾದ ಬಳಿಕ ವಿಷಯಸಕ್ತನಾಗೋದುಚಿತವೇ ಅ.ಪ.
ಶಕ್ತಿಹೀನನಾದ ಮನವು ಬಯಸುತಿಪ್ಪ ಬಯಕೆ ಪೂರೈಸು ಗುರುವೇ 1
ಕಾಮತಾಪದಿ ಮುಳುಗಿ ಪರ ಕಾಮಿನಿಯಳ ನೆನೆವೆ ಕೇಳೋಬಿನ್ನಪ ಕಾಮಹರನೆ 2
ರಾಮನಾಮ ಸುಖದ ಸವಿಯು ಮರೆತೆನೊ ಶಾಮಕಂಧರ ತಂದೆವರದಗೋಪಾಲವಿಠ್ಠಲನಪ್ರೀಯಾ 3
***