ಕೈಯ ಮುಗಿವೆನೋ ಶ್ರೀ ಹನುಮರಾಯ
ankita rangavittala
KAIYA MUGIVENO SRI HANUMARAYA
ಕೈಯ ಮುಗಿವೇನೋ ಶ್ರೀ ಹನುಮರಾಯ
ಕೈಯ ಮುಗಿವೇನೋ || ಪ ||
ಕೈಯ ಮುಗಿವೆ ನಿನಗೆ ನಾನು
ಕಣ್ಣು ತೆರೆದು ನೋಡು ಎನ್ನ
ಕಪಟತನವನ್ನೇ ಬಿಟ್ಟು
ಕರುಣ ವಚನ ಪಾಲಿಸಯ್ಯ || ೧ ||
ಅಂಜನಾದೇವಿ ಪುತ್ರನಾಗಿ
ಬಂಜೆತನವ ಹಿಂಗಿಸಿದಿ
ಸಂಜೀವ ನಿನ್ನಂಗ್ರಿಯೊಳು
ಎನಗೆ ವಚನ ಪಾಲಿಸಯ್ಯ || ೨ ||
ಸೀತೆಗೆ ಹೋಗಿ ಉಂಗುರವ ಕೊಟ್ಟು
ಶೀಘ್ರದಿಂದ ಲಂಕೆಯ ಸುಟ್ಟು
ವೇಗದಿಂದ ಹೋಗಿ
ರಾವಣನ ಸಂಹರಿಸಿದವಗೆ || ೩ ||
ಸೇತು ಬಂಧನವ ಮಾಡಿ
ರಾಮನಂಗ್ರಿಯನ್ನೇ ಪಾಡಿ
ಸರ್ವ ಜನರ ಕಣ್ಣಿಲಿ ನೊಡ್ದ
ಸರ್ವ ಶ್ರೀ ರಂಗವಿಠಲಗೆ ||೪||
***
kaiya mugiveno shrI hanumaraya
kaiya mugiveno || pa ||
kaiya mugive ninage nanu
kannu teredu nodu enna
kapatatanavanne bittu
karuna vacana palisayya || 1 ||
anjanadevi putranagi
banjetanava hingisIdi
sanjIva ninnanghriyolu
enage vacana palisayya || 2 ||
sitege hogi ungurava kottu
shIghradinda lankeya suttu
vegadinda hogi
ravanana samharisidavage || 3 ||
setu bandhanava madi
ramananghriyanne padi
sarva janara kannili nodda
sarva shree rangavithalage ||4||
***