..
ಇಂದು ನಿನ್ನ ಪಾದಕಮಲವಾ | ಪೊಂದಿದೆ ದೇವಾ ಪ
ನಂದಸುತ ಪುರಂದರಾನುಜ | ಸಿಂಧೂರ ವರಪೋಷಕ ಸುರ
ವೃಂದ ವಿನುತ ಇಂದಿರೇಶಾ ಅ.ಪ
ಪಿತನೆ ನಿನ್ನ ಒಮ್ಮೆ ನೆನೆಯದೆ | ಮತಿಹೀನನಾಗಿ
ಸ್ಮøತಿ ಪುರಾಣ ಕಥೆಯ ಕೇಳದೆ |
ವಿತತ ಮಹಿಮ ಪತಿತ ನಾನಾದೆ
ಅತಿವೇಗದಿ ಎನ್ನನು ನೀ ಹಿತದಿ ಪಾಲಿಸು ಕ್ಷಿತಿಜೇಶನೆ 1
ವಿಧಿಸುರೇಂದ್ರವಂದ್ಯ ನಗಧರ ಬಿಡದೆ ಸಲಹೊ
ಮದನವಿತ ನೀನಧಮ ದೈತ್ಯರ
ಮದವಳಿದು ಮುದದಿ ಒದಗಿದ
ಸುಧೆಯನು ಸುರರಿಗೆ ನೀ ದಯದಿಕ್ಕಿದ ಪದುಮನಯನಾ 2
ಸಿಂಧುಶಯನ ಶಾಮಸುಂದರ ವಂದಿಸುವೆ
ಕಂದುಗೊರಳ ಸಖ ಶ್ರೀಮನೋಹರ
ಕಂದನೆಂದೀಮಂದಭಾಗ್ಯನ ತಂದೆಯ ಮರೆಯದೆ ನೀ
ಚಂದದೀ ಪೊರೆ ದಶಕಂಧರಾರಿ 3
***