Showing posts with label ಮಧ್ವಮತ ಪೊಂದದೆ ಬದುಕಿದವನೂ ಹದ್ದು ಕಾಗಿ vijaya vittala. Show all posts
Showing posts with label ಮಧ್ವಮತ ಪೊಂದದೆ ಬದುಕಿದವನೂ ಹದ್ದು ಕಾಗಿ vijaya vittala. Show all posts

Thursday 17 October 2019

ಮಧ್ವಮತ ಪೊಂದದೆ ಬದುಕಿದವನೂ ಹದ್ದು ಕಾಗಿ ankita vijaya vittala

ವಿಜಯದಾಸ
ಮಧ್ವಮತ ಪೊಂದದೆ ಬದುಕಿದವನೂ
ಹದ್ದು ಕಾಗಿ ಬದುಕಿ ಕಾಲವನು ಕಳೆದಂತೆ ಪ

ಸಕಲೇಂದ್ರಿಯಗಳು ಇದ್ದು ನಯನೇಂದ್ರಿಯ ಇಲ್ಲದಂಅ.ಪ.

ಫಲಪುಷ್ಪಯಿಲ್ಲದಾ ಗಿಡಬಳ್ಳಿ ಇದ್ದಂತೆ
ಮಳೆಯಿಲ್ಲದಾ ಬೆಳಸು ನೋಡಿದಂತೆ
ಚಲುವನಾದಡೆ ಏನು ಗುಣಹೀನನಾದಂತೆ
ಖಳರು ನಿತ್ಯಾಕರ್ಮ ಚರಿಸಿದಂತೆ 1

ಉತ್ತಮರ ಕೂಡದಾ ಯಾತ್ರೆ ಮಾಡಿದಂತೆ
ಕತ್ತೆ ಪರಿಮಳ ಪೊತ್ತು ತಿರುಗಿದಂತೆ
ಮೃತ್ತಿಕೆ ಶೌಚ ಇಲ್ಲದೆ ಆಚಾರ ಮಾಡಿದಂತೆ
ಸತ್ತ ಹೆಣಕ್ಕೆ ವಸ್ತ್ರ ಶೃಂಗರಿಸಿದಂತೆ2

ನಿಶಿಕರ ಇಲ್ಲದಾ ತಾರೆಗಳು ಇದ್ದಂತೆ
ವಸುಧಿಪತಿಯಿಲ್ಲದಾ ರಾಜ್ಯದಂತೆ
ಹಸಿವೆ ಇಲ್ಲದವನು ಮಧುರನ್ನ ಉಂಡಂತೆ
ಹಸುಗಳಿಲ್ಲದ ಮನೆ ವೊಪ್ಪಿದಂತೆ 3

ತಾರತಮ್ಯಗಳಿಲ್ಲದ ವೇದ ಓದಿದಂತೆ
ಪುರಂದರದಾಸರು ಪೇಳಿದಂತೆ
ಸಿರಿ ವಿಜಯವಿಠ್ಠಲನ
ಕಾರುಣ್ಯ ಪಡಿಯದವ ಅಧಮನಂತೆ 4
*********