Showing posts with label ಳಳ- ಪ್ರಕೃತಿ ಗೀತೆ- ಮೂಡಲ ಮನೆಯ ಮುತ್ತಿನ ನೀರಿನ MOODALA MANEYA MUTTINA NEERINA. Show all posts
Showing posts with label ಳಳ- ಪ್ರಕೃತಿ ಗೀತೆ- ಮೂಡಲ ಮನೆಯ ಮುತ್ತಿನ ನೀರಿನ MOODALA MANEYA MUTTINA NEERINA. Show all posts

Monday, 27 December 2021

ಮೂಡಲ ಮನೆಯ ಮುತ್ತಿನ ನೀರಿನ others MOODALA MANEYA MUTTINA NEERINA




p kalinga rao





also taken in movie 'Bellimoda' in 1967

ದ. ರಾ. ಬೇಂದ್ರೆ

ಮೂಡಲ ಮನೆಯ ಮುತ್ತಿನ ನೀರಿನ

ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ ||


ಬಾಗಿಲು ತೆರೆದು ಬೆಳಕು ಹರಿದು

ಜಗವೆಲ್ಲಾ ತೊಯ್ದ , ದೇವಾನು ಜಗವೆಲ್ಲಾ ತೊಯ್ದ


ಎಲೆಗಳ ಮೇಲೆ ಹೂಗಳ ಒಳಗೆ

ಅಮೃತದ ಬಿಂದು, ಕಂಡವು ಅಮೃತದ ಬಿಂದು


ಯಾರಿರಿಸಿಹರು ಮುಗಿಲಿನ ಮೇಲಿಂದ

ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು


ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು

ಹೊರಟಿತು, ಹಕ್ಕಿಗಳ ಹಾಡು


ಗಂಧರ್ವ ಸೀಮೆಯಾಯಿತು ಕಾಡಿನ ನಾಡು

ಕ್ಷಣದೊಳು, ಕಾಡಿನ ನಾಡು

***


-Da. Ra. Bendre

mooDala maneya muttina neerina

erakAva hoyda, nuNNane erakAva hoyda||


bAgilu teredu beLaku haridu

jagavellA toyda, devanu jagavellA toyda


elegaLa mEle hoogaLa oLage

amrutada bindu, kanDavu amrutada bindu


yAririsiharu mugilina mElinda

illige ida tandu, eega illige ida tandu


giDaganTegaLa koraLoLaginda hakkigaLa hADu

horaTitu, hakkigaLa hADu


gandharva seemeyAyitu kADina nADu

kshaNadoLu, kADina nADu

***