..
ಶ್ರೀ ಗುರು ಜಗನ್ನಾಥಾರ್ಯ ಕರುಣಿಸಯ್ಯ
ಮೊರೆಹೊಕ್ಕೆ ತ್ವತ್ವದಕೆÉ ಮರಿಯದಲೆ ಪಿಡಿ ಕೈಯ್ಯ ಪ
ಪ್ರಹ್ಲಾದನನುಗ್ರವು ಎಲ್ಲ ಕಾಲದಲಿ ನಿ
ನ್ನಲ್ಲಿ ಸಂಪೂರ್ಣವಾಗಿರುವದೆಂಬ
ಸೊಲ್ಲು ಲಾಲಿಸಿ ನಿನ್ನ ಪಲ್ಲಾವಾಂಘ್ರಿಗೆ ನಮಿಪೆ
ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ 1
ಜನಕಾಗ್ರಜಾತಾರ್ಯ | ನರನಿಸಿ ಜನಿಸುತ
ಮಂತ್ರಮುನಿ ನಿಲಯ ಮುನಿವರ್ಯ ಶ್ರೀ ರಾಯರ
ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ
ಮನದಿಚ್ಛೆ ಪಡೆವುದರೆ ಅನುಕೂಲಿಸಿದ ಜ್ಞಾನಿ 2
ಶ್ರೀಶಾಮಸುಂದರನ ದಾಸವರ್ಯರ ಉಪ
ದೇಶವನು ಕೊಂಡು ಉಪಾಸನೆಯನು
ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ
ಭೂಸುರಾಗ್ರಣಿಯಾದ ಪ್ರತಿವಾಸರದಿ ಗೈದಂಥ
ಭೂಸುರಾಗ್ರಣಿಯಾದ ಕೋಸಿಗೆ ವಾಸ 3
***