ಶ್ರೀ ಗೋಪಾಲದಾಸಾರ್ಯ ವಿರಚಿತ
ಹರಿನಾಮ ಮಹಿಮೆ ಸುಳಾದಿ
ರಾಗ ಕಾನಡ
ಧ್ರುವತಾಳ
ಅನಂತ ಅಪರಾಧ ಎನ್ನಲ್ಲಿ ಉಂಟೊ ದೇವ
ಇನ್ನು ಮುಂದೆ ಆಗೋವು ಅನಂತವಿದ್ದರನ್ನ
ಮುನ್ನೆ ನಿನ್ನ ಆ ನಾಮವನ್ನು ನೆನೆಯದೆ
ಅನಂತ ಅಪರಾಧಗಧಿಕಾರಿ ಆನಾದೆನೊ
ನಿನ್ನ ನಾಮದಿಂದ ಹೋಗುವಷ್ಟು ದೋಷ
ಎನ್ನಿಂದ ಮಾಡಲಿ ಇನ್ನಳವಲ್ಲವು
ಇನ್ನು ತಿಳಿದು ಹೋಗೆ ಎನ್ನ ಮನವು
ನಿನ್ನ ನೆನೆಸದನ್ಯಕೆರಗುತದೆ
ಕಣ್ಣಿಲಿ ಕಂಡರೆ ಕರ್ನದಿ ಕೇಳಿದರೆ
ಇನ್ನೆಂಥ ವೈರಾಗ್ಯವನ್ನು ನಾ ತೋರುವೆ
ಕುನ್ನಿ ಸ್ವಪ್ನದಿ ಜ್ಞಾನವನ್ನು ತಂದುಕೊಂಡು
ಸನ್ನುತ ಪರರನ್ನವ ತಿಂದಂತೆ
ಎನ್ನ ದಾಸತ್ವವು ಇನ್ನಿಚ್ಛೈಸಲಿಕಯ್ಯ
ಅನಂತ ಪರಿಯಲ್ಲಿ ಶಾಸ್ತ್ರಂಗಳೆಲ್ಲ ತಿಳಿದು
ತನ್ನ ಸತಿಯನು ಅನ್ಯರಿಗೊಪ್ಪಿಸಿ
ಹೆಣ್ಣು ಶಿಶುವು ಪಡೆದು ಕನ್ಯಾದಾನವ ಮಾಡಿ
ಪುಣ್ಯ ಗಳಿಸಿದಂತೆ ಎನ್ನ ಧರ್ಮವಯ್ಯಾ
ನಿನ್ನ ದಾಸನಾಗಿ ನಿನ್ನ ಮುದ್ರೆಯ ಧರಿಸಿ
ನಿನ್ನ ಹಾಡಿ ಪಾಡಿ ನಿನ್ನನ್ನು ಒಲಿಸದೆ
ಹೊನ್ನು ಉಳ್ಳವನಲ್ಲಿ ಚನ್ನಾಗಿ ಪೋಗಿನ್ನು
ನಿನ್ನಂಥ ದಾತನ ಇನ್ನೆಲ್ಲಿ ಕಾಣೆನೆಂ -
ದುನ್ನತ ಪರಿಯಲ್ಲಿ ಬಣ್ಣಿಸಿ ಕೊಂಡಾಡಿ
ಹೊನ್ನು ಗಳಿಸಿ ತಂದು ಅನ್ನದಾನವ ಮಾಡಿ
ಘನ್ನತೆ ಪಡೆದೆನೊ ನಿನ್ನನೊಯಿದು ಬೀರಿ
ಇನ್ನೆನಾಯಿತೆಂಬೊ ಪುಣ್ಯಪಾಪಂಗಳು
ಮುನ್ನೆ ಮಾಡಿದದೆಲ್ಲಿ ಇನ್ನು ಮಾಡುತಲಿಪ್ಪೆ
ಸನ್ನುತ ಮುನಿಪ್ರಿಯ ಗೋಪಾಲವಿಟ್ಠಲ
ಎನ್ನ ದೇಹ ಬಲು ಭಂಗಗೆಟ್ಟಿತ್ತಲ್ಲೊ ॥ 1 ॥
ಮಠ್ಯತಾಳ
ಆಶೆ ಎಂಬೋದು ದೊಡ್ಡ ದೋಷವೆಂಬೋದು ತಿಳಿದು
ರಾಶಿ ನರಕದೊಳು ವಾಸ ಮಾಡುವೆನಯ್ಯಾ
ಹೇಸಿ ಜಂಬುಕ ತಾನು ಗ್ರಾಸಕಕ್ಕಿಯ
ವಾಸೆ ಎಂದು ತಿಳಿದು ಘಾಸೆ ಬಟ್ಟ ತೆರದಿ
ಮೋಸ ಹೋಗಿ ದುರಾಶಿಗೆರಗಿ ಇನ್ನು
ಮೀಸಲದ ಪುಣ್ಯ ಹ್ರಾಸ ಮಾಳ್ಪೆನಯ್ಯಾ
ಈ ಸಮಸ್ತ ದೋಷರಾಶಿ ಒಪ್ಪಿಸಿನ್ನು
ಬೇಸರದಲೆ ಶ್ರೀ ವಾಸುದೇವ ನಿನ್ನ ಸಾಸಿರನಾಮವು
ಸೂಸಿ ವೃಷ್ಟಿಗರೆದು ನಾಶಮಾಡು ಅಘ -
ಪಾಶ ಕಡಿಯೋ ಬೇಗ
ಶೇಷಶಾಯಿ ಗೋಪಾಲವಿಟ್ಠಲ ನಿಜ -
ದಾಸರಲಿ ಭಕುತಿ ಲೇಸು ಆಗಿನೀಯೊ ॥ 2 ॥
ತ್ರಿಪುಟತಾಳ
ಆವಾವ ಕಾಲಕ್ಕೂ ಜೀವ ಯೋಗ್ಯತೆ ಅರಿದು
ದೇವ ನೀನು ಫಲವನು ನೀವುತಲಿರೇ
ಆ ಒಂದು ಪರಿ ಯತನವ ಮಾಡಿ ನಿನ್ನ
ಸೇವಿಗೆ ಅನ್ಯಥಾವಾಗುವೆನೊ ತನುವಿನ
ಗ್ರಾಸವು ಕಾವುವಾತನೆ ಬಲ್ಲ
ಹಾವು ಬಲ್ಲದೆ ವೃಥಾ ಧಾವತಿ ಅಲ್ಲದೆ
ಹೇವ ಇಲ್ಲದೆ ಮಾನ ಈ ವಿಧ ಯೆಳೆದು
ಸಾವು ಕೊಲ್ಲುತಲಿದೆ ದೇವ ಕೇಳೊ
ಆವದಾದರು ನಿಷ್ಠುರ ಆಡಿದಡೆ
ದೇವನೆ ಪ್ರೇರಕನೆಂದು ಅರಿಯದಲೆ
ನೋವಾಗುವೆನೊ ನಿನ್ನ ಭಾವಾರ್ಥ ತಿಳಿಯದೆ
ಆವ ಕಾರ್ಯದಲ್ಲಿ ಆವ ಕರ್ಮಗಳಲ್ಲಿ
ಆವಾವರಲ್ಲಿನ್ನು ಯಾವತ್ತರಲ್ಲಿ ನೀ ವ್ಯಾಪಕನಾಗಿದ್ದು
ಜೀವರ ಕೈಯ್ಯ ವ್ಯಾಪಾರ ಮಾಡಿಸಿ ಇನ್ನು
ಆ ಉದಕದಿ ಕಮಲವು ಇದ್ದಂಥಾ
ಈ ಉಪಾಸನೆಯನ್ನು ಸಾವಧಾನದಿ ಮಾಳ್ಪ
ಜೀವರಿಗೆ ಇನ್ನು ನೀವರಿಯೆ ರಂಗ
ದೇವಕಿನಂದನ ಗೋಪಾಲವಿಟ್ಠಲ
ಆವರಲ್ಲಿ ಇದ್ದರನ್ನ ಕಾವ ಭಾರ ನಿನ್ನದೊ ॥ 3 ॥
ಅಟ್ಟತಾಳ
ಸಾಕು ಸಾಕು ದುರ್ವಿಷಯ ಕೆರಗಿಸದೆ
ನೂಕ ಬೇಡವು ನರಕದ ಜನುಮಕ್ಕೆ
ನೂಕು ನೂಕು ದುರಿತ ಕುಪಥಗಳೆಲ್ಲ
ನೂಕಿಸಬೇಡದೆ ದಿನವ ಕಳಿಯದೆ ವ್ಯರ್ಥ
ಬೇಕು ಎನಿಸು ನಿನ್ನ ಶರಣರ ಸಹವಾಸ
ಸಾಕು ಸಾಕೆಂಬಂತೆ ಸಾಲದೆ ನಿನ್ನ ನಾಮ
ವಾಕು ಎನಗೆ ಇತ್ತು ಸಹಕಾರವಾಗಿನ್ನು
ನೀ ಕಾಯಬೇಕೆನ್ನ ಸಾಕಲ್ಯ ಗುಣನಿಧಿ
ಲೋಕರಕ್ಷಕ ರಂಗ ಗೋಪಾಲವಿಟ್ಠಲ
ವ್ಯಾಕುಲಗೊಳಿಸು ನಿನ್ನ ಕಳವಳಿಕಿಯೊಳು ॥ 4 ॥
ಆದಿತಾಳ
ಧರೆಯೊಳು ಅಜ್ಞಾನವೆಂಬ ಕತ್ತಲಿಗಿನ್ನು
ಹರಿ ನಿನ್ನ ಚರಣ ಸ್ಮರಣೆ ದೀಪ ನಿಲ್ಲಿಸೆ
ಇರಬಲ್ಲದೆ ತಾ ತಮವು ಹರಿದು ಪೋಗುವದಯ್ಯ
ಕರುಣಾಂಕರನೆ ಸ್ಮರಣೆ ಪಾಲ ಉಳ್ಳವರಿಗೆ
ಕರಿ ಯೆಂಬ ದೋಷಿನ್ನು ಹರಿಯು ಕಂಡ ತೆರದಿ
ಅರಿಯೆ ನಾನಾ ಪರಿ ಸಾಧನದೊಳಗೆ
ಹರಿ ನಿನ್ನ ಸ್ಮರಣೀಗೆ ಇನ್ನೊಂದು ನಾ ಕಾಣೆ
ಪರಮ ಮೂಢನು ನಾನು ಕರವಡ್ಡಿ ಬೇಡಿಕೊಂಬೆ
ವರವ ಪಾಲಿಸು ದೇವ ಕರುಣಾಕರ ಕೃಷ್ಣ
ದುರಿತ ಬಂದರಾಗಲಿ ಹರುಷ ಬಂದರಾಗಲಿ
ಇರುಳು ಹಗಲು ನಿನ್ನ ಸ್ಥಿರ ಭಕುತಿ ಸ್ಮರಣೆಯಿತ್ತು
ಪೊರಿ ಎನ್ನ ಬಿಡದಲೆ ಗೋಪಾಲವಿಟ್ಠಲ ॥ 5 ॥
ಜತೆ
ನಿನ್ನ ವೃಕ್ಷದ ಹಣ್ಣು ಅನ್ಯರು ವೈದರೆ
ಪುಣ್ಯ ನಿನ್ನದು ಕಾಣೊ ಗೋಪಾಲವಿಟ್ಠಲ ॥********
ಶ್ರೀ ಗೋಪಾಲದಾಸಾರ್ಯ ವಿರಚಿತ ಹರಿನಾಮ ಮಹಿಮೆ ಸುಳಾದಿ
ರಾಗ ಕಾನಡ ಧ್ರುವತಾಳ
ಅನ್ನಂತ ಅಪರಾಧ ಎನ್ನಲ್ಲಿ ಉಂಟೊ ದೇವ
ಇನ್ನು ಮುಂದೆ ಆಗೋವು ಅನಂತವಿದ್ದರನ್ನ
ಮುನ್ನೆ ನಿನ್ನ ಆ ನಾಮವನ್ನು ನೆನೆಯದೆ
ಅನ್ನಂತ ಅಪರಾಧಗಧಿಕಾರಿ ಆನಾದೆನೋ
ನಿನ್ನ ನಾಮದಿಂದ ಹೋಗುವಷ್ಟು ದೋಷ
ಎನ್ನಿಂದ ಮಾಡಲಿ ಇನ್ನಳವಲ್ಲವು
ಇನ್ನು ತಿಳಿದು ಹೋಗೆ ಎನ್ನ ಮನವು
ನಿನ್ನ ನೆನೆಸದನ್ಯಕೆರಗುತದೆ
ಕಣ್ಣಲ್ಲಿ ಕಂಡರೆ ಕರ್ಣದಿ ಕೇಳಿದರೆ
ಇನ್ನೆಂಥ ವೈರಾಗ್ಯವನ್ನು ನಾ ತೋರುವೆ
ಕುನ್ನಿ ಸ್ವಪ್ನದಿ ಜ್ಞಾನವನ್ನು ತಂದುಕೊಂಡು
ಸನ್ನುತ ಪರರನ್ನವ ತಿಂದಂತೆ
ಎನ್ನ ದಾಸತ್ವವು ಇನ್ನಿಚ್ಛೈಸಲೇಕಯ್ಯ
ಅನ್ನಂತ ಪರಿಯಲಿ ಶಾಸ್ತ್ರಂಗಳೆಲ್ಲ ತಿಳಿದು
ತನ್ನ ಸತಿಯನು ಅನ್ಯರಿಗೊಪ್ಪಿಸಿ
ಹೆಣ್ಣು ಶಿಶುವು ಪಡೆದು ಕನ್ಯಾದಾನವ ಮಾಡಿ
ಪುಣ್ಯ ಗಳಿಸಿದಂತೆ ಎನ್ನ ಧರ್ಮವಯ್ಯ
ನಿನ್ನ ದಾಸನಾಗಿ ನಿನ್ನ ಮುದ್ರೆಯ ಧರಿಸಿ
ನಿನ್ನ ಹಾಡಿ ಪಾಡಿ ನಿನ್ನನ್ನು ಒಲಿಸದೆ
ಹೊನ್ನು ಉಳ್ಳವನಲ್ಲಿ ಚೆನ್ನಾಗಿ ಪೋಗಿನ್ನು
ನಿನ್ನಂಥ ದಾತನ್ನ ಇನ್ನೆಲ್ಲಿ ಕಾಣೆನೆಂ -
ದುನ್ನತ ಪರಿಯಲ್ಲಿ ಬಣ್ಣಿಸಿ ಕೊಂಡಾಡಿ
ಹೊನ್ನು ಗಳಿಸಿ ತಂದು ಅನ್ನ ದಾನವ ಮಾಡಿ
ಘನ್ನತೆ ಪಡೆದೆನೊ ನಿನ್ನ ನೊಯಿದು ಬೀರಿ
ಇನ್ನೇನಾಯಿತೆಂಬೊ ಪುಣ್ಯ ಪಾಪಂಗಳು
ಮುನ್ನೆ ಮಾಡಿದದೆಲ್ಲಿ ಇನ್ನು ಮಾಡುತಲಿಪ್ಪೆ
ಸನ್ನುತ ಮುನಿಪ್ರಿಯ ಗೋಪಾಲವಿಠ್ಠಲ
ಎನ್ನ ದೇಹ ಬಲು ಭಂಗಗೆಟ್ಟಿತಲ್ಲೊ ॥ 1 ॥
ಮಠ್ಯತಾಳ
ಆಶೆ ಎಂಬೋದು ದೊಡ್ಡ ದೋಷವೆಂದು ತಿಳಿದು
ರಾಶಿ ನರಕದೊಳು ವಾಸ ಮಾಡುವೆನಯ್ಯ
ಹೇಸಿ ಜಂಬುಕ ತಾನು ಗ್ರಾಸಕಕ್ಕಿಯ
ವಾಸೆ ಎಂದು ಘಾಸೆ ಬಟ್ಟ ತೆರದಿ
ಮೋಸ ಹೋಗಿ ದುರಾಶಿಗೆರಗಿ ಇನ್ನು
ಮೀಸಲದ ಪುಣ್ಯ ಹ್ರಾಸ ಮಾಳ್ಪೆನಯ್ಯ
ಈ ಸಮಸ್ತ ದೋಷ ರಾಶಿ ಒಪ್ಪಿಸಿನ್ನು
ಬೇಸರದಲೆ ಶ್ರೀ ವಾಸುದೇವ ನಿನ್ನ
ಸಾಸಿರ ನಾಮವು ಸೂಸಿ ವೃಷ್ಟಿಗರೆದು
ನಾಶಮಾಡುವ ಅಘಪಾಶ ಕಡಿಯೋ ಬೇಗ
ಶೇಷಶಾಯಿ ಗೋಪಾಲವಿಠ್ಠಲ ನಿಜ -
ದಾಸರಲಿ ಭಕುತಿ ಲೇಸಾಗಿ ನೀಯೋ ॥ 2 ॥
ತ್ರಿಪುಟತಾಳ
ಆವಾವ ಕಾಲಕ್ಕು ಜೀವ ಯೋಗ್ಯತೆ ಅರಿದು
ದೇವ ನೀನು ಫಲವನು ನೀವುತಲಿರೆ
ಆ ಒಂದು ಪರಿ ಯತನವ ಮಾಡಿ ನಿನ್ನ
ಸೇವಿಗೆ ಅನ್ಯಥಾವಾಗುವೆನೊ
ತನುವಿನ ಗ್ರಾಸವು ಕಾವುವಾತನೆ ಬಲ್ಲ
ಹಾವು ಬಲ್ಲದೆ ವೃಥಾ ಧಾವತಿ ಅಲ್ಲದೆ
ಹೇವ ಇಲ್ಲದೆ ಮಾನ ಈ ವಿಧ ಎಳೆದು
ಸಾವು ಕೊಲ್ಲುತಲಿದೆ ದೇವ ಕೇಳೋ
ಆವದಾದರು ನಿಷ್ಠುರ ಆಡಿದಡೆ
ದೇವನೆ ಪ್ರೇರಕನೆಂದು ಅರಿಯದಲೆ
ನೋವಾಗುವೆನು ನಿನ್ನ ಭಾವಾರ್ಥ ತಿಳಿಯದೆ
ಆವ ಕಾರ್ಯದಲ್ಲಿ ಆವ ಕರ್ಮಗಳಲ್ಲಿ
ಆವಾವರಲ್ಲಿನ್ನು ಯಾವತ್ತರಲ್ಲಿ
ನೀ ವ್ಯಾಪಕನಾಗಿನ್ನು
ಜೀವರ ಕೈಯ್ಯ ವ್ಯಾಪಾರ ಮಾಡಿಸಿ ಇನ್ನು
ಆ ಉದಕದಿ ಕಮಲವು ಇದ್ದಂತಾ
ಈ ಉಪಾಸನೆಯನ್ನು ಸಾವಧಾನದಿ ಮಾಳ್ಪ
ಜೀವರಿಗೆ ಇನ್ನು ನೀವರಿಯೆ ರಂಗ
ದೇವಕಿನಂದನ ಗೋಪಾಲವಿಠ್ಠಲ
ಆವರಲ್ಲಿ ಇದ್ದರೆನ್ನ ಕಾವ ಭಾರ ನಿನ್ನದೊ ॥ 3 ॥
ಅಟ್ಟತಾಳ
ಸಾಕು ಸಾಕು ದುರ್ವಿಷಯಕ್ಕೆರಗಿಸದೆ
ನೂಕ ಬೇಡವು ನರಕದ ಜನುಮಕ್ಕೆ
ನೂಕು ನೂಕು ದುರಿತ ಕುಪಥಗಳೆಲ್ಲ
ನೂಕಿಸಬೇಡದೆ ದಿನವ ಕಳಿಯದೆ ವ್ಯರ್ಥ
ಬೇಕು ಎನಿಸು ನಿನ್ನ ಶರಣರ ಸಹವಾಸ
ಸಾಕು ಸಾಕೆಂಬಂತೆ ಸಾಲದೆ ನಿನ್ನ ನಾಮ
ವಾಕು ಎನಗೆ ಇತ್ತು ಸಹಕಾರವಾಗಿನ್ನು
ನೀ ಕಾಯಬೇಕೆನ್ನ ಸಾಕಲ್ಯ ಗುಣನಿಧಿ
ಲೋಕರಕ್ಷಕ ರಂಗ ಗೋಪಾಲವಿಠ್ಠಲ
ವ್ಯಾಕುಲಗೊಳಿಸು ನಿನ್ನ ಕಳವಳಿಕೆಯೊಳು ॥ 4 ॥
ಆದಿತಾಳ
ಧರೆಯೊಳು ಅಜ್ಞಾನವೆಂಬ ಕತ್ತಲಿಗಿನ್ನು
ಹರಿ ನಿನ್ನ ಚರಣ ಸ್ಮರಣೆ ದೀಪ ನಿಲ್ಲಿಸೆ
ಇರಬಲ್ಲದೆ ತಾ ತಮವು ಹರಿದು ಪೋಗುವುದಯ್ಯ
ಕರುಣಾಕರನೆ ಸ್ಮರಣೆ ಫಲ ಉಳ್ಳವರಿಗೆ
ಕರಿಯೆಂಬ ದೋಷಿನ್ನು ಹರಿಯು ಕಂಡ ತೆರದಿ
ಅರಿಯೆ ನಾನಾ ಪರಿ ಸಾಧನದೊಳಗೆ
ಹರಿ ನಿನ್ನ ಸ್ಮರಣೀಗೆ ಇನ್ನೊಂದು ನಾ ಕಾಣೆ
ಪರಮ ಮೂಢನು ನಾನು ಕರವಡ್ಡಿ ಬೇಡಿಕೊಂಬೆ
ವರವ ಪಾಲಿಸು ದೇವ ಕರುಣಾಕರ ಕೃಷ್ಣ
ದುರಿತ ಬಂದರಾಗಲಿ ಹರುಷ ಬಂದರಾಗಲಿ
ಇರುಳು ಹಗಲು ನಿನ್ನ ಸ್ಥಿರ ಭಕುತಿ ಸ್ಮರಣೆಯಿತ್ತು
ಪೊರೆ ಎನ್ನ ಬಿಡದಲೆ ಗೋಪಾಲವಿಠ್ಠಲ ॥ 5 ॥
ಜತೆ
ನಿನ್ನ ವೃಕ್ಷದ ಹಣ್ಣು ಅನ್ಯರು ಒಯ್ದರೆ
ಪುಣ್ಯ ನಿನ್ನದು ಕಾಣೋ ಗೋಪಾಲವಿಠ್ಠಲ ॥
***************