Showing posts with label ಬಾಲೆಯಾದಾನು ಬಲಭೀಮ tandevaradagopala vittala. Show all posts
Showing posts with label ಬಾಲೆಯಾದಾನು ಬಲಭೀಮ tandevaradagopala vittala. Show all posts

Thursday, 5 August 2021

ಬಾಲೆಯಾದಾನು ಬಲಭೀಮ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಬಾಲೆಯಾದಾನು ಬಲಭೀಮ ಪ


ಬಾಲೇಂದು ಮುಖ ಸೋಲಿಪ ವದನದಿಂದೊಪ್ಪುತಅ.ಪ.


ಖುಲ್ಲ ಕೀಚಕ ತಾ ಚಲ್ವಗೆ ಮರುಳಾಗಿ ಸೊಲ್ಲು ಸೊಲ್ಲಿಗೆ ಬಲು ಕಳವಳಿಸುವನಾ ತರುಣಿ ದ್ರೌಪದಿ ತಾ ತಾಳದೆ ತನ್ನೊಳು ತಿಳುಪಿದಳು ಪತಿಯೊಡನೆಕೇಳಿದ ಮಾತ್ರದಿ ಸೀಳುವೆನೆನುತಲಿ ಕೋಪದಿಂದೊಮ್ಮೆಗೆ 1

ಶೇಷ ಮುಖ್ಯ ಶಶಿ ಶೇಖರ ಸನ್ನುತ ಶಶಿಮುಖಯೆಂಬೋದು ಸರಿಯಾ-ಶ್ವಾಸನ ಸತಿಯಳ ಸರಸಾಟ ಸಹಿಸದೆ ಮೀಸೆಯ ತಿರುವುತ ಸಾರಿ ಸರಿ ಯಾರೆನ್ನುತ ಸತಿಯಾಗಿರು ಸುಖಸತಿಯಳ ಮಾಡಿ ನಿನ್ನಾಳುವೆನೆಂಬೋದು ಕೇಳಿ ಭರದಿ 2

ಸುಮಶರ ಶೋಷಕೆ ಹಿಮಕರ ವ್ಯಾಪಿಸಿ ಹರುಷವಗೊಳುತಾ ಸರಸಿಜಮುಖಿಯೆಂದು ಸರಸರ ಸಾಗಲು ಶಿರದೊಳು ಚರಣವ ಸೇರಿಸಿದಾ ಶಾಮರೂಪ ತಂದೆವರದಗೋಪಾಲವಿಠ್ಠಲನ ಸ್ಮರಿಸುತ 3

***