ಜಾರತ್ವವನು ಮಾಡಿದ ಪಾಪಗಳಿಗೆಲ್ಲ
ಗೋಪಿಜನ ಜಾರನೆಂದರೆ ಸಾಲದೆ?
ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೆ?
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ್ನ ಕೊಂದವನೆಂದರೆ ಸಾಲದೇ?
ಪ್ರತಿದಿವಸ ಮಾಡಿದ ಪಾಪಗಳಿಗೆಲ್ಲಾ
ಪತಿತ ಪಾವನನೆಂದು ಕರೆದರೆ ಸಾಲದೇ?
ಇಂತಿಪ್ಪ ಮಹಿಮೆಗಳೊಳೊಂದನ್ನಾದರೂ ಒಮ್ಮೆ
ಸಂತಸದ ನೆನೆಯೆ ಸಲಹುವ ನಮ್ಮ ಶಿರಿ ಕೃಷ್ಣ.//
**************
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮಃ.
ಶ್ರೀ ವ್ಯಾಸರಾಯರು ರಚಿಸಿದ ಸುಂದರ ಕೃತಿ
ಪಾಪಿಗಳನ್ನು ತಿರಸ್ಕರಿಸದೆ ವ್ಯಾಸರಾಜರು ಹಾಡುತ್ತಿದ್ದ ಕೃತಿ.-