Showing posts with label ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು purandara vittala GOPIYA BHAGYAVIDU SRIPATHI TAA SHISHU. Show all posts
Showing posts with label ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು purandara vittala GOPIYA BHAGYAVIDU SRIPATHI TAA SHISHU. Show all posts

Monday 6 September 2021

ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು purandara vittala GOPIYA BHAGYAVIDU SRIPATHI TAA SHISHU



ರಾಗ ಬೆಹಾಗ್. ಆದಿ ತಾಳ (raga, taala may differ in audio)

ಗೋಪಿಯ ಭಾಗ್ಯವಿದು
ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು ||ಪ||

ಕಡು ಮುದ್ದು ರಂಗನ ತೊಡೆಯ ಮೇಲೆತ್ತುತ
ಜಡೆಯ ಹೆಣೆದು ಹೂ ಮುಡಿಸಿ
ಬೇಗ ಬಿಡದೆ ಮುತ್ತಿನ ಚೆಂದರಳೆಲೆಯನು
ಸಡಗರಿಂದಲಂಕರಿಸಿದಳು ||

ನಿತ್ಯನಿರ್ಮಲನಿಗೆ ನೀರನೆರೆದು ತಂ-
ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ
ಮುತ್ತು ಕೊಟ್ಟು ಬಲು ವಿಧದಿಂದಾಡಿಸಿ
ಅರ್ತಿಯಿಂದಲಿ ತಾ ತೂಗಿದಳು ||

ದೃಷ್ಟಿ ತಾಗೀತೆಂದಿಟ್ಟು ವಿಭೂತಿಯ
ತಟ್ಟೆಯೊಳಾರತಿಗಳ ಬೆಳಗಿ
ಥಟ್ಟನೆ ಉಪ್ಪು ಬೇವು ನಿವಾಸಿಳಿ
ತೊಟ್ಟಿಲೊಳಿಟ್ಟು ತಾ ತೂಗಿದಳು ||

ಎಮ್ಮಯ್ಯ ರನ್ನನೆ ಸುಮ್ಮನಿರೋ ದೊಡ್ಡ
ಗುಮ್ಮನು ಬರುವನು ಅಳಬೇಡ
ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು
ಬೊಮ್ಮನ ಪಿತನ ತಾ ತೂಗಿದಳು ||

ಮಾಧವ ಜೋ ಮಧುಸೂದನ ಜೋ ಜೋ
ಯಾದವರಾಯ ಶ್ರೀರಂಗನೆ ಜೋ
ಆದಿಮೂರುತಿ ನಮ್ಮ ಪುರಂದರವಿಠಲನ
ಆದರದಿಂದ ತಾ ತೂಗಿದಳು ||
*********

ಗೋಪಿಯ ಭಾಗ್ಯವಿದು ಶ್ರೀಪತಿ
ತಾ  ಶಿಶು ರೂಪಿನಲಿರುವುದು (ಪ)


ಎನ್ನನೇ ಚಿನ್ನನೆ ಸುಮ್ಮನಿರು ದೊಡ್ಡ
ಗುಮ್ಮನು ಬರುವನು ಅಳದಿರು ಕಂದ
ಗುಮ್ಮನು ಬರುವನು ಗೊಂಬೆಯ ಕೊಡುವೆನು
ಬಾ... ಆತುರದಿಂದಲಿ ತಾ ಕೂಗಿದಳಾಗ..... (೧)
                              (ಗೋಪಿಯ)

ಕಡುಮುದ್ದು ರಂಗನ ತೊಡೆಯ ಮೇಲೆತ್ತುತ
ಜಡೆಯ ಹಣೆದು ಹೂವನೆಮುಡಿಸುತಲಿ
ಬಿಗಿದು ಸುತ್ತಿನ ಜಡೆ ಹಾರಗಳಂದಡಿತ
ಬ್ರಹ್ಮನ ಪಿತನೆಂದು ತಾ ಕೂಗಿದಳಾಗ...... (೨)
                              (ಗೋಪಿಯ)

ದೃಷ್ಟಿತಾಕಿತೆಂದು ಇಟ್ಟಲೇ ವಿಭೂತಿ
ತಟ್ಟೆಯೋಲಾರಥಿಗಳ ಬೆಳಗುತಲಿ
ಆದಿ ಮೂರುತಿ ನಮ್ಮ ಪುರಂದರ ವಿಠಲನ
ಆತುರದಿಂದಲಿ ತಾ ಕೂಗಿದಳಾಗ.... (೩)
                             (ಗೋಪಿಯ)
********