ನಂಬಿ ಕೆಟ್ಟವರಿಲ್ಲವೋ ಈ ಗುರುಗಳ1
ನಂಬದೆ ಕೆಡುವರುಂಟೊ ಪ
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರನ್ನ ಅ.ಪ
ಜಲಧರ ದ್ವಿಜವರಗೆ ತಾನೆ ಒಲಿದು
ಸುಲಭ ಮುಕುತಿಯನಿತ್ತನು
ಚಲುವ ಸುತನ ಪಡೆದ ಲಲನೆಗೆ ತ್ವರದಿಂದ
ಪುಲಿನಗರ್ತದಿ ದಿವ್ಯ2 ಜಲವನಿತ್ತವರನ್ನ3 1
ಮೃತ್ಯುದೂತರು ತನ್ನನು ಪೊಂದಿದ ನಿಜ-
ಭೃತ್ಯನ ಕರೆದೊಯ್ಯಲು
ಸತ್ತ ದ್ವಿಜನ ತಾನು ಮತ್ತೆ ಧsರೆಗೆ ತಂದು
ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನ 2
ಧಿಟ್ಟ ಗುರುಜಗನ್ನಾಥವಿಠಲನೊಲುಮೆ
ಘಟನವಾದುದರಿಂದ
ಘಟನಾಘಟನ ಕಾರ್ಯ ಘಟನ ಮಾಡುವೊ ನಮ್ಮ
ಪಟು ಗುರುವರ ಹೃತ್ಪಟದೊಳಗಿಹರನ್ನ4 3
1 ರಾಯರ ಪಾದ; 2 ಸ್ವಚ್ಚ; 3 ತೋರಿದನೆಂದು; 4 ಹೃತ್ಪಟದಿರುವೋರನ್ನ - ಪಾಠ
***
ರಾಗ: ಕಲ್ಯಾಣಿ ತಾಳ: ತ್ರಿಪುಟ (raga tala may differ in audio)
pallavi
mambi keTTavarillavO E gurugala nambade keduvaruNTo
anupallavi
nambida janarige bembala tAnagi hambalisida phala tumbi koduvaranna
caraNam 1
jaladhara dvijavarage tAne olidu sulabha mukutiyanittano
celuva sutana paDeda lalanege pararinda pulinagartadi divya jalavanitaavaranna
caraNam 2
mrutyu dUtaru tannanu pondida nija dhrutyana karedoyyalu satta dvijana tAnu
matte dharege tandu mrutyu bidisi sukha ittu porediharanna
caraNam 3
dittaguru jagannatha vitthalanoLume ghatanavAdudarinda ghaTanaghaTana
kArya ghaTana mADuvo namma patu guruvara hrutpatadiruvoranna
***
ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರ ||
ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ
ಚೆಲುವ ಸುತನ ಪಡೆದ ಲಲನೆಗೆ ಸ್ವರದಿಂದ
ಪುಲಿನಗರ್ಪದಿ ದಿವ್ಯ ಜಲವನಿತ್ತವರ ||೧||
ಮೃತ್ಯುದೂತರು ತನ್ನ ಪೊಂದಿದ ನಿಜ ಭಕ್ತರ ಕರೆದೊಯ್ಯಲು
ಸತ್ತ ದ್ವಿಜನ ತಾನು ಮತ್ತೆ ಧರೆಗೆ ತಂದು
ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರ ||೨||
ದಿಟಗುರು ಜಗನ್ನಾಥ ವಿಠಲನ ಒಲುಮೆ ಘಟನವಾದುದರಿಂದ
ಘಟನಾ ಘಟನಕಾರ್ಯ ಘಟನ ಮಾಡುವ ನಮ್ಮ
ಪಟು ಗುರುವರ ಹೃತ್ಪುಟದಿ ಇರುವರ ||೩||
***
naMbi keTTavarillavo rAyara pAda naMbi keTTavarillavo
naMbida janarige beMbala tAnAgi
haMbalisida phala tuMbi koDuvara ||
jaladhara dvijavarage tAnE olidu sulabhadi mukutiyanitta
cheluva sutana paDeda lalanege svaradiMda
pulinagarpadi divya jalavanittavara ||1||
mRutyudUtaru tanna poMdida nija bhaktara karedoyyalu
satta dvijana tAnu matte dharege taMdu
mRutyu biDisi sukhavittu poredihara ||2||
diTaguru jagannAtha viThalana olume ghaTanavAdudariMda
ghaTanA ghaTanakArya ghaTana mADuva namma
paTu guruvara hRutpuTadi iruvara ||3||
***