ರಾಗ: ಭೈರವಿ ತಾಳ: ಅಟ
ಎಂದು ಕಾಂಬೆ ಶ್ರೀ ಗುರುವರರ ಎಂದು ಕಾಂಬೆ ಪ
ಎಂದು ಕಾಂಬೆ ನಿಮ್ಮ ಸುಂದರ ಚರಣವ
ಅಂದಿನ ಸುಖ ಪೊಂದಿ ನಾ ಧನ್ಯನಾಗುವೆ ಅ. ಪ
ಪಿತನಿಂದತಿಕಷ್ಟ ಪಟ್ಟು ಪ್ರತಿಕೂಲ ಎಣಿಸದೆ
ಪಿತಗೆ ಶಿರಿಪತಿಯ ತೋರಿದ ಪ್ರಹ್ಲಾದರ 1
ಧರ್ಮರಕ್ಷಣೆಗಾಗಿ ಸಿಂಹಾಸನವನೇರಿ
ಕಾಮಿತಾರ್ಥವನಿತ್ತ ಶ್ರೀವ್ಯಾಸತೀರ್ಥರ 2
ಜಾನಕಿರಮಣ ಶ್ರೀಮೂಲರಾಮರ ಪಾದ
ಧ್ಯಾನಮಾಳ್ವ ಶ್ರೀ ಗುರು ರಾಘವೇಂದ್ರರ 3
***