Showing posts with label ಗುರುವೇ ನೀ ಕರುಣಿಸದಿರಲು ಉಧ್ಧರಿಸುವ ankita abhinava janardhana vittala GURUVE NEE KARUNISADIRALU UDDHARISUVA. Show all posts
Showing posts with label ಗುರುವೇ ನೀ ಕರುಣಿಸದಿರಲು ಉಧ್ಧರಿಸುವ ankita abhinava janardhana vittala GURUVE NEE KARUNISADIRALU UDDHARISUVA. Show all posts

Saturday 4 December 2021

ಗುರುವೇ ನೀ ಕರುಣಿಸದಿರಲು ಉಧ್ಧರಿಸುವ ankita abhinava janardhana vittala GURUVE NEE KARUNISADIRALU UDDHARISUVA





ಶ್ರೀ ಅಭಿನವ ಜನಾರ್ದನವಿಠಲರ ಕೃತಿ 

ಗುರುವೇ ನೀ ಕರುಣಿಸದಿರಲು ಉಧ್ಧರಿಸುವ
ಧೊರೆಗಳೀ ಧರೆಯೊಳುಂಟೆ || ಪ ||
ಕರುಣಾಸಾಗರ ಎನ್ನ ಕರೆದು ಕೈಪಿಡಿಯೋ ನೀ
ಕರುಣಿಸೋ ಸುಧೀಂದ್ರಕರಜ ಶ್ರೀರಾಘವೇಂದ್ರ || ಅ ||

ತರುಣಿ ತರಳರು ಈ ಶರೀರಬಂಧುಗಳು
ಉಪಚರಿಸಲಾದಪರಂತೆ ॥
ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ
ಮರಿಯಂತೆ ಬಾಯ್ಬಿಡುತಿರಲು ನೋಳ್ಪರೆ , ಆಸ್ಮದ್ || ೧ ||

ಕ್ಷಿತಿಯೊಳು ಭಕ್ತರ ವಾಂಛಿತವಿತ್ತು ಪೊರೆದ ಕೀ -
ರುತಿ ಕೇಳಿ ಅತಿಶಯದಿ
ಪತಿತಪಾವನನೆಂದು ನುತಿಸಿ ಸಂಸ್ತುತಿಸಿ ತ್ವ -
ರಿತದಿ ಬಂದು ಶರಣಾಗತನಾದ ಮೇಲೆ || ೨ ||

ದಿನಕರ ಕುಲಜಾತನೆನಿಪ ರಾಮನ ಪಾದ
ಶರಣಾರಾಧಕರೆನೆ ನಿತ್ಯ
ಮುನಿಕುಲೋತ್ತಂಸ ಸಜ್ಜನಶಿಖಾಮಣಿ ಗುಣ
ಗಣ ಅಭಿನವಜನಾರ್ದನವಿಠ್ಠಲನ ದೂತ || ೩ ||
***

 ರಾಗ ಹಂಸಧ್ವನಿ       ಆದಿತಾಳ (raga tala may differ in audio)


ಗುರುವೇ ನೀ ಕರುಣಿಸದಿರಲು ಉಧ್ಧರಿಸುವ
ಧೊರೆಗಳು ಧರೆಯೊಳು೦ಟೆ                                 || ಪ ||
ಕರುಣಾಸಾಗರ ಎನ್ನ ಕರೆದು ಕೈಪಿಡಿದು ನೀ
ಕರುಣಿಸು ಸುಧೀ೦ದ್ರಕರಜ ರಾಘವೇ೦ದ್ರ              || ಅ ||

ತರುಣಿ ತರಳರೀಶರೀರಬ೦ಧುಗಳುಪ
ಚರಿಸಲಾದಪರೆಲ್ಲ
ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ
ಮರಿಯ೦ತೆ ಬಾಯ್ಬಿಡುತಿರಲು ನೋಳ್ಪರೆ ಆಸ್ಮತ್        || ೧ ||

ಕ್ಷಿತಿಯೊಳು ಭಕ್ತರವಾ೦ಛೆಗಳಿತ್ತು
ಪೊರೆವವಾರುತಿ ಕೇಳಿ
ಪತಿತಪಾವನನೆ೦ದು ನತನಾಗಿ ತುತಿಸಿ ತ್ವ
ರಿತದಿ ಬ೦ದು ಶರಣಾಗತನಾದ ಮೇಲಿನ್ನು            || ೨ ||

ದಿನಕರಕುಲಜಾತನೆನಿಪ ರಾಮರ ಪಾದ
ವನಜಾರಾಧಕರೆನಿಪ
ಮುನಿಕುಲೋತ್ತ೦ಸ ಸಜ್ಜನಶಿಖಾಮಣಿ ಗುಣ
ಗಣ ಅಭಿನವಜನಾರ್ಧನವಿಠ್ಠಲನ ದೂತ
*******