Showing posts with label ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು mangalangahari vittala. Show all posts
Showing posts with label ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು mangalangahari vittala. Show all posts

Monday, 6 September 2021

ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು ankita mangalangahari vittala


ankita ಮಂಗಳಾಂಗಹರಿವಿಠಲ 

ರಾಗ: ಮಣಿರಂಗು ತಾಳ: ಆದಿ


ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು

ಇಂಥಾ ಸಂತರ ಕಂಡೆನೆ ಪ


ಉನ್ನಂತ ಬೃಂದಾವನದಲ್ಲಿ ಕುಳಿತ 

ಅನಂತ ಮಹಿಮರ ಕಂಡೆನೆ ಅ.ಪ

ಮಂತ್ರಾಲಯದ ಮಣ್ಣನೆ ತುಳಿದು 

ಮಂತ್ರಮುಗ್ದರಾಗಿ ನಿಂದು

ಮಂತ್ರ ಸ್ತೋತ್ರಗಳನುಚ್ಚರಿಸುತ್ತ ಬಂದು

ಮಂತ್ರಾಕ್ಷತೆ ಸ್ವೀಕರಿಪ ಭಕ್ತರ ಕಂಡೆನೆ 1

ತುಂಗಭದ್ರ ನದಿಯಲ್ಲಿ ಸ್ನಾನವ ಮಾಡಿ

ಮಂಗಳ ಮಹಿಮರ ಮನದಿ ಕೊಂಡಾಡಿ

ಮಂಗಳೋತ್ಸವವ ಮನದಣಿಯ ನೋಡಿ

ಕಂಗಳು ತುಂಬಿ ಬಂತಾನಂದದಲೋಲ್ಯಾಡಿ 2

ಮಂಚಾಲಮ್ಮನ ಕಂಡು ಮುದದಿ ಸಾಲಲಿ 

ಬಂದು ಮುನಿಗೆದುರಾದ ಮಾರುತಿಯ ಕಂಡೆನೆ

ಮಂಗಳ ಅಭಿಷೇಕ ಅಲಂಕಾರವ ಕಂಡು

ಮಂಗಳಾಂಗ ಹರಿ ಕಿಂಕರನ ಕಂಡೆನೆ 3 

ನೆತ್ತಿ ಮೇಲೆ ಲಕ್ಷ್ಮೀನರಸಿಂಹರ ಕಂಡೆ

ಮತ್ತೆ ಹೃದಯದಲ್ಲಿ ರಾಮರ ಕಂಡೆನೆ

ಚಿತ್ತವ ಸೆಳೆವ ರಜತ ಕವಚ ಕಂಡೆ

ಉತ್ತಮ ಕಾವಿಹೊದ್ದ ಯತಿವರರ ಕಂಡೆನೆ 4

ಬದಿಯಲಿ ಶ್ರೀಗಳ ಪೂಜಾ ವೈಖರಿ ಕಂಡೆ

ತುದಿಗಾಲಲಿ ನಿಂತ ಭಕ್ತವೃಂದವ ಕಂಡೆನೆ

ವಿಧಿಪೂರ್ವಕ ಹಾಡೋ ಹರಿದಾಸರ ಕಂಡೆ

ವಿಧಿಪಿತ ಮಂಗಳಾಂಗಹರಿವಿಠಲನ ಕಂಡೆನೆ 5

***