Showing posts with label ಇಂದು ವದನೆ ಪಾರ್ವತಿಯೆ ನಾ ಇಲ್ಲಿಗೆ bheemesha krishna. Show all posts
Showing posts with label ಇಂದು ವದನೆ ಪಾರ್ವತಿಯೆ ನಾ ಇಲ್ಲಿಗೆ bheemesha krishna. Show all posts

Friday, 27 December 2019

ಇಂದು ವದನೆ ಪಾರ್ವತಿಯೆ ನಾ ಇಲ್ಲಿಗೆ ankita bheemesha krishna

ಇಂದು ವದನೆ ಪಾರ್ವತಿಯೆ ನಾ ಇಲ್ಲಿಗೆ
ಬಂದೆನು ಬಾಗಿಲು ತೆಗೆಯೆ ಜಾಣೆ
ಬಂದೆನು ಬಾಗಿಲು ತೆಗೆಯೆ ||

ಬಂದವರ್ಯಾರೀ ವ್ಯಾಳ್ಯದಿ ಬಾಗಿಲು
ಬಂದು ತೆಗೆಯೊರ್ಯಾರಿಲ್ಲ ಈಗ
ಬಂದು ತೆಗೆಯೊರ್ಯಾರಿಲ್ಲ ||

ಅಂಗನಾಮಣಿ ಕೇಳೆ ಗಂಗಾಧರೆನಿಸಿದ
ಚಂದ್ರಶೇಖರ ನಾ ಬಂದೀನೆ ಜಾಣೆ
ಚಂದ್ರಶೇಖರ ನಾ ಬಂದೀನೆ ||

ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆ
ಬಂದ ಕಾರಣವೇನು ನೀನು ಅವ
ರಿಂದ ಕಾರಣ ಮತ್ತೇನು ||

ಕುಸುಮಲೋಚನೆ ಕೇಳೆ ಪಶುಪತಿ ನಾ ಬಂದೆ
ಕುಶಲದಿ ಬಾಗಿಲು ತೆಗೆಯೆ ಜಾಣೆ
ಕುಶಲದಿ ಬಾಗಿಲು ತೆಗೆಯೆ ||

ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬು
ಹಸನಾಗಿ ತೋರಿಸೊ ಎನಗೆ ಕೊಂಬು
ಹಸನಾಗಿ ತೋರಿಸೊ ಎನಗೆ ||

ಸರ್ವಶರೀರದಲ್ಲೆತ್ತಿಕೊಂಡಿರುವಂಥ
ಶ್ರೇಷ್ಠ ಶಿವನು ನಾ ಬಂದೀನೆ ಜಾಣೆ
ಶ್ರೇಷ್ಠ ಶಿವನು ನಾ ಬಂದೀನೆ ||

ಸರ್ವ ಸೇರಿರುವಂಥ ಹುತ್ತ ನೀನಾದರೆ
ಇತ್ತ ಬರುವೋದುಚಿತಲ್ಲ ಪೋಗೊ
ಇತ್ತ ಬರುವೋದುಚಿತಲ್ಲ ||

ಕಾಂತೆ ಪಾರ್ವತಿ ನೀಲಕಂಠ ನಾ ಬಂದೀನಿ
ಸಂತೋಷದಿ ಬಾಗಿಲು ತೆಗೆಯೆ
ಸಂತೋಷದಿ ಬಾಗಿಲು ತೆಗೆಯೆ ||

ಕಂಠದೊಳಗೆ ಕಪ್ಪಿದ್ದರೆ ನೀ ನವಿ-
ಲಂತೆ ಕುಣಿದು ತೋರಿಸೆನಗೆ ನವಿ-
ಲಂತೆ ಕುಣಿದು ತೋರಿಸೆನಗೆ ||

ಫಾಲಾಕ್ಷ ನಾ ರುಂಡಮಾಲೆ ಧರಿಸಿದಂಥ
ಶೂಲಿಯು ನಾನು ಬಂದೀನೆ ತ್ರಿ-
ಶೂಲಿಯು ನಾ ಬಂದೀನೆ||

ಮೂರು ಶೂಲೆಗಳ್ಯಾವ್ಯಾವ ಕಡೆಯಲುಂಟು
ಭಾಳ ಬಲ್ಲವರಲ್ಲೆ ಪೋಗಯ್ಯ ನೀ
ಭಾಳ ಬಲ್ಲವರಲ್ಲೆ ಪೋಗಯ್ಯ ||

ಪ್ರಾಣದೊ(ದ್ವ)ಲ್ಲಭೆ ಕೇಳೆ ಸ್ಥಾಣು ನಾ ಬಂದೀನಿ
ಜಾಣೆ ನೀ ಬಾಗಿಲು ತೆಗೆಯೆ ಒಳ್ಳೆ
ಜಾಣೆ ನೀ ಬಾಗಿಲು ತೆಗೆಯೆ ||

ಸ್ಥಾಣು ನೀನಾದರೆ ವೇಣುಮದ್ದಲೆ ಮಾಡೊ
ಜಾಣರ ಮನೆಗೆ ನೀ ಪೋಗಯ್ಯ ಒಳ್ಳೆ
ಜಾಣರ ಮನೆಗೆ ನೀ ಪೋಗಯ್ಯ ||

ಶಂಬರಾರಿಯ ಸಂಹರಿಸಿದ ಗಜ ಚ-
ರ್ಮಾಂಬರಧಾರನು ನಾನೇ ಚ-
ರ್ಮಾಂಬರಧಾರನು ನಾನೇ ||

ಕಾಮನ ವೈರಿ ಭಸ್ಮಾಂಗವ ಧರಿಸಿz À
ಸಾಮಜ ವಸನವ ನೋಡಿ ಇರ-
ಲಾರೆನು ನಿನ್ನೊಡಗೂಡಿ||

ಭೂತಗಣಂಗಳ ನಾಥನಾಗಿರುವೊ ಪ್ರ-
ಖ್ಯಾತನು ನಾನು ಬಂದೀನೆ ಸದ್ಯೋ-
ಜಾತನು ನಾನು ಬಂದೀನೆ ||

ಭೂತಗಣವ ಕೂಡಿ ಯಾತಕೆ ಬರುವುದು
ಭೀತಿ ಬಡುವೆ ಮುಂಚೆ ಸಾಗೋ ನಾ
ಭೀತಿ ಬಡುವೆ ಮುಂಚೆ ಸಾಗೋ||

ಮಾತಿಗೆ ಮಾತನಾಡುವೋರೆ ಪಾರ್ವತಿ ಕೇಳೆ
ಮೂಕನಂತಿರುವೆನೆ ನಾನು ಇನ್ನು
ಮೂಕನಂತಿರುವೆನೆ ನಾನು ||

ಮೂಕನಂತಿರುವುದ್ವಿವೇಕ ಭೀಮೇಶಕೃಷ್ಣ-
ನ್ನ ಕಾರುಣಕೆ ಪಾತ್ರಳೇನೋ ನಿನಗೆ
ನಾ ಕೈಯ ಮುಗಿವೆ ಬಾ ನೀನು||
***

Induvadane parvatiye na illigebandenu
Bagilu tegeye jane
Bandenu bagilu tegeye ||1||

Bandavaryari vyalyadi bagilu
Bandu tegeyoryarilla Iga
Bandu tegeyoryarilla ||2||

Anganamani kele gangadharenisida
Chandrasekara na bandine jane
Chandrasekara na bandine ||3||

Sindhurajana satisutaranhottillige
Banda karanavenu ninu ava
Rinda karana mattenu ||4||

Kusumalochane kele pasupati na bande
Kusaladi bagilu tegeye jane
Kusaladi bagilu tegeye ||5||

Pasugaligella patiyadare nina kombu
Hasanagi toriso enage kombu
Hasanagi toriso enage ||6||

Sarvasariradallettikondiruvantha
Sreshtha Sivanu na bandine jane
Sreshtha Sivanu na bandine ||8||

Sarva seriruvantha hutta ninadare
Itta baruvoduchitalla pogo
Itta baruvoduchitalla||9||

Kante parvati nilakantha na bandini
Santoshadi bagilu tegeye
Santoshadi bagilu tegeye ||10||

Kanthadolage kappiddare ni navi-
Lante kunidu torisenage navi-
Lante kunidu torisenage ||11||

Palaksha na rundamale dharisidantha
Suliyu nanu bandine tri-
Suliyu na bandine||12||

Muru sulegalyavyava kadeyaluntu
Bala ballavaralle pogayya ni
Bala ballavaralle pogayya ||13||

Pranado(dva)llabe kele sthanu na bandini
Jane ni bagilu tegeye olle
Jane ni bagilu tegeye ||14||

Sthanu ninadare venumaddale mado
Janara manege ni pogayya olle
Janara manege ni pogayya ||15||

Sambarariya samharisida gaja cha-
Rmambaradharanu nane cha-
Rmambaradharanu nane ||16||

Kamana vairi basmangava dharisiz À
Samaja vasanava nodi ira-
Larenu ninnodagudi ||17||

Butaganangala nathanagiruvo pra-
Kyatanu nanu bandine sadyo-
Jatanu nanu bandine ||18||

Butaganava kudi yatake baruvudu
Biti baduve munce sago na
Biti baduve munce sago||19||

Matige matanaduvore parvati kele
Mukanantiruvene nanu innu
Mukanantiruvene nanu ||20||

Mukanantiruvudviveka bimesakrushna-
Nna karunake patraleno ninage
Na kaiya mugive ba ninu ||21||
***