Showing posts with label ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ vasudeva vittala. Show all posts
Showing posts with label ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ vasudeva vittala. Show all posts

Wednesday, 1 September 2021

ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ankita vasudeva vittala

..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಎನ್ನಾಗಮವ ಹೀಗಾಯಿತೊ ದೇವ

ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ


ಸಕ್ಕರಿ ತಾಯೆಂದು ಸಂತಿಗೆ ಕಳುಹಲು

ತಕ್ಕಡಿ ಲಶುನವ ತಂದ ತರಳನಂತೆ 1


ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ

ತುರುಚಿಯನೆ ತಂದ ತರಳನಂತೆ 2


ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ

ಕೆಸರು ಪೂಸಿಕೊಂಡು ಬಂದ ತರಳನಂತೆ3


ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ

ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4


ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು

ಜ್ಞಾಪಕಗೊಳಿಸಿದೆ ವಾಸುದೇವವಿಠಲ 5

***