Showing posts with label ಗುರುರಾಜರೆನಬೇಕು ಶ್ರೀ ರಾಘವೇಂದ್ರರ krishnavittala. Show all posts
Showing posts with label ಗುರುರಾಜರೆನಬೇಕು ಶ್ರೀ ರಾಘವೇಂದ್ರರ krishnavittala. Show all posts

Monday, 6 September 2021

ಗುರುರಾಜರೆನಬೇಕು ಶ್ರೀ ರಾಘವೇಂದ್ರರ ankita krishnavittala

 ರಾಗ: ಮೋಹನ ತಾಳ: ಝಂಪೆ

ಗುರುರಾಜರೆನಬೇಕು ಶ್ರೀ ರಾಘವೇಂದ್ರರ

ಉರುತರದ ಜ್ಞಾನಹರಿಸಿ ಕಾಯುವರ


ಭಕ್ತರಭೀಷ್ಟವ ನಿರುತ ಸಲ್ಲಿಸುವರ

ಭಕ್ತಾಭಿಮಾನಿ ಎಂದೆನಿಸಿ ಮೆರೆವವರ

ವ್ಯಕ್ತರಾಗುತ ತಾವು ಮಂತ್ರಾಲಯದೊಳು

ಮುಕ್ತಿಮಾರ್ಗವ ತೋರಿ ಸತತ ಕಾಯುವರ 1

ಭೂಸುರವಂದ್ಯರ ಭುವಿಯೊಳು ಖ್ಯಾತರ

ವಾಸುದೇವನಪಾದ ಬಿಡದೆ ಭಜಿಸುವರ

ಲೇಸಾಗಿ ಭಕ್ತರ ಸತತವು ಪೋಷಿಸಿ

ದೋಷರಾಶಿಗಳೆಲ್ಲ ಹರಿಸಿ ಕಾಯುವರ 2

ಪರವಾದಿಗಳನ್ನೆಲ್ಲ ನಿರುತ ನಿಗ್ರಹಿಸುತ

ಪರಮತತಿಮಿರಕ್ಕೆ ತರಣಿಯಂತೆಸೆವರ

ಪರಮಾತ್ಮನಪಾದ ಬಿಡದೆ ಭಜಿಸುವ ನಿತ್ಯ

ಪರಮಪಾವನರಾಗಿ ಇಳೆಯೊಳು ಮೆರೆವವರ 3

ಅಂಧ ಪಂಗು ಮೂಕ ಬಧಿರತ್ವ ಹರಿಸುವರ ಭವ-

ಬಂಧನವೆಂದೆಂಬ ಕಟ್ಟು ಬಿಡಿಸುವರ

ಒಂದೇಮನದಿ ಭಜಿಪ ಭಕ್ತರನಿಷ್ಟವ

ಚೆಂದದಿಂದಲಿ ಹರಿಸಿ ಬಿಡದೆ ಪಾಲಿಸುವರ 4

ಪಾಪಾತ್ಮರ ಪೊರೆವ ಪರಮಪುರುಷೋತ್ತಮರ

ತಾಪತ್ರಯಹರಿಪ ತಾಪಸೋತ್ತಮರ

ಆಪದ್ಭಾಂದವ ಶ್ರೀಕೃಷ್ಣವಿಠಲನ

ಪ್ರೇಮದಿ ಪೂಜಿಪ ಗುರು ರಾಘವೇಂದ್ರರ 5

***