..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಆಲವವೆ ನಮಗೆ ಸಫಲವು ಕಾಣಿರೊ
ಶ್ರೀಲಕುಮಿಯ ಪತಿಯ ನೆನೆವೆಯಾಗಿ ಪ
ಕೀಳು ಜನರಿಂದ ಆಡುವಾ ನುಡಿಗಳು
ಹಾಳು ಹರಟೆಗಳು ಬಹು ಜಾಳು ಮಾತುಗಳು
ಕಾಲ ಪರಿವುದು ಕೇಳಿ ಜನರುಗಳೆ
ನಾಳೆ ನೋಡಿದಂಥ ದಾಸರು ದೊರೆಯರು1
ವ್ಯಾಳೆ ಬಂದಾಗ ಸಾಧಿಸದವನಾ
ಬಾಳಿವೆ ಬೋಳೆ ಅದು ಗೋಳಲ್ಲವೆ
ಗಾಳಿ ಬಂದಾ ಕೈಲೆ ತೂರಿಕೊಳ್ಳಿರೊ
ಮ್ಯಾಲೆ ತನ್ನೊಶವೇನೊ ದೇಶಕಾಲಗಳು 2
ಸೋಲಿಸಿ ದುರ್ಮತರ ಕೀಳು ಮಳಿಗೆಗಳ ಪರಿ
ಸೀಲಿಸೊ ಪ್ರತಿ ದಿವಸದಲಿ
ಅಲವ ಬೋಧರ ಮತವ ಲೀಲೆಯಿಂ ತಿಳಿಕೊಂಬ್ಯ
ಪಾಲಿಸುವ ದಯದಿಂದ ವಾಸುದೇವವಿಠಲ 3
***