kruti by Srida Vittala Dasaru Karjagi Dasappa
ON ಶ್ರೀ ಸತ್ಯಧರ್ಮರು Uttaradi Mutt
ಚಿತ್ತೆಸೈ ಬಿನ್ನೈಸುವೆ ಪರಾಕು ಪ
ಸತ್ಯಧರ್ಮ ಸದ್ಗುರುರಾಯಾ ಅ.ಪ.
ನಿನ್ನ ನಂಬಿದವ ಧನಮದಾಂಧರಿಗೆ
ಇನ್ಯಾತಕೆ ತೆರೆಯಲಿ ಬಾಯಾ 1
ಕಾಲಹರಣ ಬಲು ಕಷ್ಟವಾಗುತಿದೆ
ಪಾಲಿಸುವುದು ಸತ್ಪಾಥೇಯಾ 2
ಶ್ರೀದವಿಠಲಾಶ್ರಿತ ಜನವತ್ಸಲ
ಸಾಧು ಸೇವ್ಯ ಸತ್ಯದಿಗೇಯಾ 3
***