ಏಳು ಹನುಮಂತ ಎಷ್ಟು ನಿದ್ರೆ || ಪ ||
ಮಾತನಾಡಲು ಬೇಕು ಮುದ್ರಿಕೆ ತರಲುಬೇಕು
ಹರಿ ಕುಶಲವ ಜಾನಕಿಗೆ ತಿಳಿಸಬೇಕು ವನವ ಕೀಳಲು ಬೇಕು
ಚೂಡಾಮಣಿ ತರಲುಬೇಕು
ಹರಿ ಹರುಷದಿಂದಲಿ ಖ್ಯಾತಿ ಪಡೆಯಲುಬೇಕು || ೧ ||
ಶರಾಧಿ ಲಂಗಿಸಬೇಕು ರಘುಪತಿಯ ಕೂಡಿರಬೇಕು
ದುರುಳ ಇಂದ್ರಜಿತನ ಗೆಲ್ಲಬೇಕು
ಅನುಜ ಲಕ್ಷ್ಮಣಗೆ ಸಂಜೀವನ ತಂದು ಕೊಡಲುಬೇಕು
ಹನುಮಂತ ಬಲವಂತ ಎಂದೆನಿಸಬೇಕು || ೨ ||
ದುಷ್ಟ ರಕ್ಕಸರನೆಲ್ಲ ಕುಟ್ಟಿ ಕೆಡಹಲುಬೇಕು
ಹತ್ತು ತಲೆ ರಾವಣನ ಬಲವಿಳಿಸಲು ಬೇಕು
ಭಕ್ತ ವಿಭೀಷಣಗೆ ಪಟ್ಟ ಕಟ್ಟಲುಬೇಕು
ಲಕ್ಷ್ಮಿ ಸಹಿತ ಅಯೋಧ್ಯೆಗೆ ತೆರಳಬೇಕು || ೩ ||
ಕುರು ಕುಲದಲ್ಲಿ ಕುಂತಿ ಸುತನಾಗಿ ಜನಿಸಬೇಕು
ರಣದಲ್ಲಿ ಕೌರವರ ಗೆಲ್ಲಬೇಕು
ವನದೊಳಗೆ ಘನ ತೃಷೆಯ ಘಾಸಿ ಪಡಿಸಲುಬೇಕು
ಮಡದಿಗೆ ಸೌಗಂಧವ ತರಲುಬೇಕು || ೪ ||
ಯತಿಯಾಗಿ ಬರಬೇಕು ಕುಮತವ ಖಂಡಿಸಲುಬೇಕು
ಅದ್ಭುತ ವಾದಿಗಳ ಗೆಲ್ಲಬೇಕು
ಮಧ್ವ ಶಾಸ್ತ್ರವ ಲೋಕಕೆಲ್ಲಾ ಭೋಧಿಸಲುಬೇಕು
ಮುದ್ದು ಪುರಂದರವಿಠ್ಠಲನ್ನ ದಾಸನೆಂದೇನಿಸಬೇಕು ||೫||
***
yelu hanumantha yeshtu nidre
yelu hanumantha yeshtu nidre || p ||
maathanaadalu beku mudrike tharalu beku
hari kushalava janakige thilisabeku
vanava keelalu beku chudamani tharalubeku
hari harushadindali Kyathi padeyalubeku ||1||
sharadhi langisabeku raghupathiya kudirabeku
durula indrajithana gellabeku
anuja lakshmanage sanjeevana thandu kodalubeku
hanumantha balavantha endenisabeku ||2||
dushta rakkasaranella kutti kedahalubeku
hathu thale ravanana balavilisalubeku
bhakta vibhishanage patta kattalubeku
Lakshmi sahitha ayodyege theralabeku ||3||
kurukuladalli kunti suthanagi janisabeku
ranadalli kauravara gella beku
vanadolage Ghana thrusheya ghassi padisalubeku
madadige soughandhava tharalubeku ||4||
yathiyagi barabeku kumatha kandisalubeku
adbhutha vaadhigala gellabeku
Madhwa shastrava lokakella bhodisalubeku
muddu purandara vittalana dasanendenisabeku ||5||
***