Showing posts with label ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು venkatesha vittala EE PARIYA MAHIME INNAVA YATIGALIGUNTU. Show all posts
Showing posts with label ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು venkatesha vittala EE PARIYA MAHIME INNAVA YATIGALIGUNTU. Show all posts

Tuesday, 2 November 2021

ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು ankita venkatesha vittala EE PARIYA MAHIME INNAVA YATIGALIGUNTU



ವೆಂಕಟೇಶ ವಿಠಲರ ರಚನೆ 

ರಾಗ ಅಠಾಣ ತಾಳ ಖಂಡ ಛಾಪು 


ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು

ಈಡಿಲ್ಲವೊ ಗುರು ರಾಘವೇಂದ್ರರಿಗೆ


ಪಾಪರಾಶಿಗಳನೆಲ್ಲ ಪರಿಹಾರ ಮಾಡುವರೊ

ಭೂತಳದೊಳಿವರ ದಿವ್ಯ ಸೇವೆಯನು ಮಾಡುವರ ಅ. ಪ


ರಾ ಎಂದು ನುಡಿದರೆ ರೋಗಗಳು ಬಾರವೊ

ಘ ಎಂದು ನುಡಿದರೆ ದುಷ್ಕರ್ಮ ಹಾನಿ

ವೇ ಎಂದು ನುಡಿದರೆ ವೈಕುಂಠ ತೋರ್ಪರೊ

ಇಂದ್ರನೆಂದರೆ ಸಕಲ ಭೋಗಗಳ ಕೊಡುತಿಹರೊ 1


ವರತುಂಗತೀರದಲಿ ವೈಷ್ಣವ ಮತೋದ್ಧಾರ

ಪರಮಶೋಭಿತರಿವರ ನೋಡಿದವನೆ ಧನ್ಯ

ಕರಿರಾಜವರದನ ಕರುಣ ಪಡೆದವರಿವರೊ

ಕುಲಕೋಟಿ ಉದ್ಧಾರಮಾಡುತಲಿಹರೊ 2


ಪರಿಪರಿಯ ದೈವದೊಳು ವೆಂಕಟೇಶವಿಠಲನೆ ಅಧಿಕ

ಗುರುಗಳೊಳು ಕರುಣಾಳು ಶ್ರೀ ರಾಘವೇಂದ್ರರು

ನಂಬಿದ ಭಕ್ತರ ಕೈಬಿಡದೆ ಸಲಹುವರು

ಶೇಷಗಿರೀಶನ ದಾಸರು ಇವರು 3

***

ರಾಗ: ಮಾಂಡ್ ತಾಳ: ಆದಿ (raga, taala may differ in audio)

  ankita ವೆಂಕಟೇಶವಿಠಲ 

ರಾಗ: ಮಾಂಡ್ ತಾಳ: ಆದಿ


ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು

ಈಡಿಲ್ಲವೊ ಗುರು ರಾಘವೇಂದ್ರರಿಗೆ


ಪಾಪರಾಶಿಗಳನೆಲ್ಲ ಪರಿಹಾರ ಮಾಡುವರೊ

ಭೂತಳದೊಳಿವರ ದಿವ್ಯ ಸೇವೆಯನು ಮಾಡುವರ ಅ. ಪ


ರಾ ಎಂದು ನುಡಿದರೆ ರೋಗಗಳು ಬಾರವೊ

ಘ ಎಂದು ನುಡಿದರೆ ದುಷ್ಕರ್ಮ ಹಾನಿ

ವೇ ಎಂದು ನುಡಿದರೆ ವೈಕುಂಠ ತೋರ್ಪರೊ

ಇಂದ್ರನೆಂದರೆ ಸಕಲ ಭೋಗಗಳ ಕೊಡುತಿಹರೊ 1

ವರತುಂಗತೀರದಲಿ ವೈಷ್ಣವ ಮತೋದ್ಧಾರ

ಪರಮಶೋಭಿತರಿವರ ನೋಡಿದವನೆ ಧನ್ಯ

ಕರಿರಾಜವರದನ ಕರುಣ ಪಡೆದವರಿವರೊ

ಕುಲಕೋಟಿ ಉದ್ಧಾರಮಾಡುತಲಿಹರೊ 2

ಪರಿಪರಿಯ ದೈವದೊಳು ವೆಂಕಟೇಶವಿಠಲನೆ ಅಧಿಕ

ಗುರುಗಳೊಳು ಕರುಣಾಳು ಶ್ರೀ ರಾಘವೇಂದ್ರರು

ನಂಬಿದ ಭಕ್ತರ ಕೈಬಿಡದೆ ಸಲಹುವರು

ಶೇಷಗಿರೀಶನ ದಾಸರು ಇವರು 3

***