Showing posts with label ಗುರುರಾಘವೇಂದ್ರ ತವ ಚರಣ ದರುಶನಕೆ hanumesha vittala. Show all posts
Showing posts with label ಗುರುರಾಘವೇಂದ್ರ ತವ ಚರಣ ದರುಶನಕೆ hanumesha vittala. Show all posts

Friday, 27 December 2019

ಗುರುರಾಘವೇಂದ್ರ ತವ ಚರಣ ದರುಶನಕೆ ankita hanumesha vittala

ರಾಗ: [ನವರೋಜುó] ತಾಳ: [ಆದಿ]


ಗುರು ರಾಘವೇಂದ್ರ ತವ ಚರಣ ದರುಶನಕೆ

ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ   ಪ


ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ

ಅನುಕೂಲವಿಲ್ಲವೊ ಎನ್ನ ಮನೆಯೊಳಗೆ

ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ

ಎನ ಮೇಲೆ ದೋಷವೇನಿರುವದಿದರೊಳಗೆ 1

ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ

ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ

ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ

ಸುಲಭ ಸಾಧನೆ ಪೇಳಿ ಸಲಹೊ ಗುರುವರನೆ 2

ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ

ಛಂದದಿಂದಲಿ ಪರಿವಾರ ಸಹಿತಾ

ತಂದೆ ಹನುಮೇಶವಿಠಲನ ಕಂದನೆ ನಿನ್ನ

ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ 3

***

ಗುರು ರಾಘವೇಂದ್ರ ತವ ಚರಣ ದರುಶನಕೆ
ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ || ಪ ||

ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ
ಅನುಕೂಲವಿಲ್ಲವೊ ಎನ್ನ ಮನೆಯೊಳಗೆ
ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ
ಎನ ಮೇಲೆ ದೋಷವೇನಿರುವದಿದರೊಳಗೆ || 1 ||

ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ
ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ
ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ
ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ || 2 ||

ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ
ಛಂದದಿಂದಲಿ ಪರಿವಾರ ಸಹಿತಾ
ತಂದೆ ಹನುಮೇಶ ವಿಠಲನ ಕಂದನೆ ನಿನ್ನ
ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ || 3||
***

Guru Raghavendra tava charana darushanake

baralillavendu kopava madvadyako || pam||

Dhanavilla kaiyolage tanuvinali balavilla
Anukulavillavo enna maneyolage
Gana suprayasa nina dasagodagida mele
Ena mele doshaveniruvadidarolage || 1 ||

Geluvilla manadolage Palavilla samsara
Baleyolage siluki na besatteno
Halubuveno daridrya bavaneyanu tappisi
Sulaba sadhane peli salaho guruvarane || 2 ||

Ondu bageyanu toro inde na horaduvenu
Chandadindali parivara sahita
Tande hanumesa vithalana kandane ninna
Bandu noduve madve seve tava duta || 3 ||

*** 

ಗುರು ರಾಘವೇಂದ್ರ ತವ ಚರಣ ದರುಶನಕೆ
ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ || ಪ

ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ
ಅನುಕೂಲವಿಲ್ಲವೊ ಎನ್ನ ಮನೆಯೊಳಗೆ
ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ
ಎನ ಮೇಲೆ ದೋಷವೇನಿರುವದಿದರೊಳಗೆ 1

ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ
ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ
ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ
ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ 2

ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ
ಛಂದದಿಂದಲಿ ಪರಿವಾರ ಸಹಿತಾ
ತಂದೆ ಹನುಮೇಶ ವಿಠಲನ ಕಂದನೆ ನಿನ್ನ
ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ 3
******

ಗುರು ರಾಘವೇಂದ್ರ ತವ ಚರಣ ದರುಶನಕೆ
ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ ಪ

ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ
ಅನುಕೂಲವಿಲ್ಲವೊ ಎನ್ನ ಮನೆಯೊಳಗೆ
ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ
ಎನ ಮೇಲೆ ದೋಷವೇನಿರುವದಿದರೊಳಗೆ 1

ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ
ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ
ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ
ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ2

ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ
ಛಂದದಿಂದಲಿ ಪರಿವಾರ ಸಹಿತಾ
ತಂದೆ ಹನುಮೇಶ ವಿಠಲನ ಕಂದನೆ ನಿನ್ನ
ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ 3
****