..
ಬೊಮ್ಮ ಬಂದನೆಂದು ತಮ್ಮ ಲೋಕದಿ ನಮ್ಮ ಮಾರುತ ಬಂದನೆ ಧಿಮ್ಮಿ ಧಿಮ್ಮಿ ಧಿಮ್ಮಿ ಧಿಮಕು ಎನುತಲೆ ರಮ್ಮಿ ರಮಣಿಯರ ಕುಣಿಸುತ ಪ.
ರುದ್ರ ಬಂದನೆಂದು ಸಿದ್ದಜನ ಕೂಡಿಪ್ರಸಿದ್ದ ಇಂದ್ರನು ಬಂದನೆ ಅಲ್ಲಿದ್ದÀ ಪರಿವಾರ ಎಲ್ಲ ಸಹಿತಾಗಿಶುದ್ಧ ಅಗ್ನಿಯು ಬಂದನೆ 1
ಯಮನು ಬಂದನೆಂದು ಯಾಮದಿಂದಲೆಝಮ್ಮನೆ ನಿರರತಿ ಬಂದನೆ ವಿಮಲ ವಾಹನ ವರುಣ ಬಂದನೆರಮಣಿ ಗಂಗೆಯು ಬಂದಳೆ2
ವಾತ ಬಂದನೆಂದು ಖ್ಯಾತಿಯಿಂದಲೆಆತಪನು ಬಂದನೆ ವೀತ ದೋಷ ರಮೇಶನಲ್ಲಿಗೆ ನೂತನದ ಮುಯ್ಯ ನೋಡಲು3
****