Showing posts with label ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ mahipati. Show all posts
Showing posts with label ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ mahipati. Show all posts

Thursday 12 December 2019

ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ankita mahipati

ಬಾಗೇಶ್ರೀ ರಾಗ ದಾದರಾ ತಾಳ

ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ
ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ||ಧ್ರುವ||

ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ
ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ ||೧||

ಸ್ವಾಮಿ ನಿಮ್ಮ ಖೂನ ನಮ್ಮ ನಿಜಸ್ಥಾನ
ಸ್ವಾಮಿ ನಿಮ್ಮ ಜ್ಞಾನ ನಮ್ಮ ನಿಜ ಧ್ಯಾನ ||೨||

ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ
ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ ||೩||

ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ
ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ ||೪||

ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ
ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ ||೫||
****

ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ಪ  


ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ 1 

ಸ್ವಾಮಿ ನಿಮ್ಮ ಖೂನ ನಿಜಸ್ಥಾನ ಸ್ವಾಮಿ ನಿಮ್ಮ ಙÁ್ಞನ ನಿಜಧ್ಯಾನ 2 

ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ 3 

ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ 4

ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ 5

****