by ಹನುಮೇಶ ವಿಠಲ
ರಾಗ : ಆನಂದಭೈರವಿ ತಾಳ : ಬಿಲಂದಿ
ಕೆಡಬ್ಯಾಡಲೋ ಪ್ರಾಣಿ ಕೆಡಬ್ಯಾಡಾ
ನಮ್ಮ ಕಡಲ ಶಯನನ ಭಜನೆ ಬಿಡಬ್ಯಾಡಾ ।।ಪ।।
ಪರನಿಂದೆ ಮಾಡಿ ಕೆಡಬ್ಯಾಡಾ
ನನ್ನ ಸರಿ ಯಾರಿಲ್ಲೆಂದು ಮೆರೆಯಬೇಡಾ
ಪರಹಿಂಸಾಮಾಡಿ ನೀ ಕೆಡಬ್ಯಾಡಾ
ಶ್ರೀ ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ ।।೧।।
ಪರದ್ರವ್ಯವನಪಹರಿಸಲಿ ಬ್ಯಾಡಾ
ಪರಸತಿಯರ ಮೋಹಕ್ಕೊಳಗಾಗಬ್ಯಾಡಾ
ದುರಿತ ಕಾರ್ಯಕೆ ಮನ ಕೊಡಬ್ಯಾಡಾ
ಒಳ್ಳೆ ಪರೋಪಕಾರ ಮಾಡದೇ ಕೆಡಬ್ಯಾಡಾ ।।೨।।
ಮಾತಾಪಿತರ ಸೇವೆ ಬಿಡಬ್ಯಾಡಾ
ಯಮದೂತರಂದದಿ ಅವರನು ಕಾಡಬ್ಯಾಡಾ
ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ
ನಿನ್ನ ಸತಿಸುತರಾಮೋಹಕ್ಕೊಳಗಾಗಬ್ಯಾಡಾ ।।೩।।
***********