ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನಮ್ಮಾ ಬಂದನಮ್ಮಾ ನಮ್ಮ ರಂಗನು| ಇಂದು ನಮ್ಮ ಪೂರ್ವಾರ್ಜಿತಫಲ ವದಗಿ ಬಂದಿತೆಂದು ಪ
ಬಿಸಜಾಸಖ ಶತಕೋಟಕಿ ಸಮತೇಜ ದೊಪ್ಪತಿಹನಖವು| ಅಂದುಗೆ ಗೆಜ್ಜೆಯಿಂದ ಘಲುಘಲುಕೆನುತಾ 1
ಉಟ್ಟ ಪೀತಾಂಬರದ ಮ್ಯಾಲ ವಡ್ಯಾಣವನಿಟ್ಟುಕೊಂಡು| ಕಟ್ಟಿದ ಸು ಕಿಂಕಿಣಿಗಳಿಂದ ಝಣ ಝಣ ಕೆನುತಾ2
ಕರ ಕಡಿಗ ವಂಕಿ ತೋಳ ತಾಯಿತ ಕೇಯೂರವನು| ಕೌಸ್ತುಭ ವನಮಾಲೆಯಿಂದ ಪೊಳವುತಾ 3
ಕುಂಡಲ ಕದಪು ಚಲ್ವಿನಿಂದಾ| ದಾಳಿಂಬ ದಶನಾ ಸುನಶಿಕದೆಸಳು ಕಣ್ಣಿಂದಾ 4
ಸ್ಮರನಾಥನು ಸೋಲಿಪ ಭ್ರೂಲತೆಯು ಫಣಿಯಲ್ಲಿಕ| ಸ್ತೂರಿಯನಿಟ್ಟು ಹರಿಮಯ ಕಿರೀಟಕಾವಳಿಮ್ಯಾಲಿರಿಸಿಕೊಂಡು5
ಪಿಡಿದು ಬಿಂಬಾಧರಕತಂದು| ಪರಿ ಪರಿಯಲೂದುತಾ ಮಹಿಪತಿ ನಂದನ್ನ ಪ್ರೀಯನಾ 6
***