Showing posts with label ಏಳಲವ ಮಾಡಿದಿರಿ ಏನ ಕೊಟ್ಟರು purandara vittala. Show all posts
Showing posts with label ಏಳಲವ ಮಾಡಿದಿರಿ ಏನ ಕೊಟ್ಟರು purandara vittala. Show all posts

Wednesday, 4 December 2019

ಏಳಲವ ಮಾಡಿದಿರಿ ಏನ ಕೊಟ್ಟರು purandara vittala

ಪುರಂದರದಾಸರು
ಏಳಲವ ಮಾಡಿದಿರಿ ಏನ ಕೊಟ್ಟರು ಬೇಡಕಾಲಮನುಜರ ಸಂಗ ಸಾವಿರ ಕೊಟ್ಟರು ಬೇಡ ಪ.

ಆದಿ ತಪ್ಪುವನವನ ಆಶೆಮಾಡಲು ಬೇಡಕೂಡಿ ನಡಿಯುವಲ್ಲಿಕಪಟ ಬೇಡಮೂಢ ಹೆಣ್ಣಿನ ಸಂಘ ಮಮತೆ ಇದ್ದರೂ ಬೇಡಮಾಡಿದಪುಕಾರವನ್ನು ಮರೆಯಬೇಡ 1

ಬಂಧುವರ್ಗದಿ ಬಲುನಿಂದು ವಾದಿಸಬೇಡಮಂದಮತಿಯ ಕೂಡಾ ಮಾತು ಬೇಡಬರದ ತಿಥಿಗಳಲಿ ಬರಿದೆ ಕೋಪಿಸಬೇಡಇಂದಿರೇಶನ ಮರೆದು ಜಡವಾಗಬೇಡ 2

ಹವಣರಿಯದೆ ಹಗೆಗಳ ಹತ್ತಿರಗೆಯಬೇಡಜವನ ಭೂಮಿಯಲಿದ್ದು ಜೊತೆ ಬೇಡಭುವನೀಶ ಪುರಂದರವಿಠಲನ ನೆನೆಯದೆಅವಮತಿಯಾಗಿ ನೀ ಕೆಡಲುಬೇಡ 3
*******