Showing posts with label ಹರಿಪದವ ನೆನೆವಂಗೆ ನರಕದ ಭಯವಿಲ್ಲ hayavadana. Show all posts
Showing posts with label ಹರಿಪದವ ನೆನೆವಂಗೆ ನರಕದ ಭಯವಿಲ್ಲ hayavadana. Show all posts

Wednesday 1 September 2021

ಹರಿಪದವ ನೆನೆವಂಗೆ ನರಕದ ಭಯವಿಲ್ಲ ankita hayavadana

 ..

ಸುಳಾದಿ


ಧ್ರುವತಾಳ

ಹರಿಪದವ ನೆನೆವಂಗೆ ನರಕದ ಭಯವಿಲ್ಲ

ಹರಿಪದವ ನೆನೆವಂಗೆ ಮಾಯೆಯ ಭಯವಿಲ್ಲ

ಹರಿಪದವ ನೆನೆವಂಗೆ ವಿಷದ ಭಯವಿಲ್ಲ

ಹರಿಪದವ ನೆನೆವಂಗೆ ಭವದ ಭಯವಿಲ್ಲ

ಹರಿಪದವ ನೆನೆವಂಗೆ ಜನನದ ಭಯವಿಲ್ಲ

ಹರಿಪದವ ನೆನೆವಂಗೆ ಮರಣದ ಭಯವಿಲ್ಲ

ಬರಿಯ ಮಾತೇ ಅಲ್ಲ ಅಕುತೋಭಯನೆಂದು

ವರದ ಹಯವದನನ ಪದಪದುಮವ ನಂಬು 1


ಮಠ್ಯÀತಾಳ

ಧ್ರುವನ ನೋಡು ಸುರಲೋಕದಿ

ಭುವಿ ವಿಭೀಷಣನ್ನ ನೋಡಿರೊ

ಅವನಿಯ ಕೆಳಗೆ ಬಲಿಯ ಉತ್ಸಹವ ನೋಡಿ ಮನುಜರೆಲ್ಲರು

ಭುವನ ತೃತೀಯದವರೆ ಸಾಕ್ಷಿ ಹಯವದನನ ಭಜಕರಿಗೆ 2


ತ್ರಿಪುಟತಾಳ

ಹತ್ತಾವತಾರದಿ ಭಕ್ತರ ಭಯಗಳ

ಕಿತ್ತು ಭೃತ್ಯರ ಕಾಯ್ವ ಕಥೆÉಯ ಕೇಳ್ವರು

ಮತ್ತೆ ಮೃತ್ಯುಗಳ ಭೀತÀನೆಂಬುವುದ್ಯಾಕೆ

ಹೆತ್ತ ತಾಯಿಯಿಂದ ತತ್ವವ ಕೇಳಯ್ಯ

ಕರ್ತೃ ಹಯವದನನೆ ಭಕ್ತರ ಭಯಕ್ಕೆ

ಕತ್ತಲೆಗಿನನಂತೆ ಹತ್ತು ಎಂಬುದು ನಂಬು3


ಝಂಪೆತಾಳ

ಕರಿಯ ಕಾಯ್ದವನ ಪಾದವ ನಂಬು

ಉರಿಯ ನುಂಗಿದವನ ಪಾದವ ನಂಬು

ಸಿರಿ ಹಯವದನನೆ ಭಕ್ತರ ಭಯ ಸಂ-

ಹರಣನೆಂಬುದಕ್ಕಿನ್ನು ಸಂಶಯವಿಲ್ಲ 4


ರೂಪಕÀತಾಳ

ದ್ರೌಪದಿಯ ಭಯ ಪರಿಹರಿಸಿದವನಾರೈ

ಆ ಪರೀಕ್ಷಿತನ ಭವಭಂಜನನಾರೈ

ತಾಪಸರಿಗಸುರರಿಂದ ಬಂದ ಪರಿಪರಿಯ

ಆಪತ್ತುಗಳನೆಲ್ಲ ಖಂಡಿಸಿದನಾರೈ

ಶ್ರೀಪತಿ ಹಯವದನನೊಬ್ಬನೆ ತನ್ನವರ

ತಾಪತ್ರಯವ ಬಿಡಿಸಿ ತಕ್ಕೈಸಿಕೊಂಬ 5


ಅಟ್ಟತಾಳ

ವಿಷನಿಧಿಯನೊಂದು ದಾಟಿ

ವ್ಯಸನಗಳನೆಲ್ಲ ಖಂಡಿಸಿ

ಬಿಸಜವನಿತೆಯ ಕಂಡು ಬಂದ

ಅಸಮ ಹನುಮನ ನೋಡಯ್ಯ

ಕುಸುಮವನು ತರಪೋಗಿ

ಅಸುರರ ಕುಸುರಿದರಿದುದ ನೋಡಯ್ಯ

ಬಿಸಜಾಕ್ಷ ಹಯವದನ ತನ್ನ

ಹೆಸರುಗೊಂಡರೆ ಭಕ್ತರ

ವಶÀಕ್ಕಿಪ್ಪುದು ಪಾರ್ಥನ

ಯಶವ ಪಸರಿಸಿದ ಅಚ್ಚುತ 6


ಏಕÀತಾಳ

ಪೂರ್ವಕಾಲದಿ ತೀರದ ಕಥೆಗಳ ನಿ-

ವಾರಿಸಿ ಜರಿದುದ ನರರೆಲ್ಲ ಕಾಣರೆ

ಶರೀರವೆರಸಿದವರಿಗೆ ಸ್ವರ್ಗಗತಿಯುಂಟೆ

ಕರುಣಾಕರ ಕೃಷ್ಣನ ಕಂಡವರಿಗೆ ಭಯವುಂಟೆ

ಈರೇಳು ಲೋಕದೊಳಗೆ ಈ ಹಯವದನನಂತೆ

ಶರಣಾಗತಜನರ ಸಲಹುವರುಳ್ಳರೆ 7


ಜತೆ

ಸುರಾಸುರಚಕ್ರವರ್ತಿ ಅಸುರಮದಭೇದನ್ನ

ಸಿರಿ ಹಯವದನನ್ನ ಚರಣವೆ ಗತಿಯೆನ್ನು

***