Showing posts with label ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ jayesha vittala. Show all posts
Showing posts with label ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ jayesha vittala. Show all posts

Thursday, 5 August 2021

ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ankita jayesha vittala

 ..

ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ


ಮಾಯೇಶ ಮಧುವೈರಿ ತಾಯಿಯಂದದಿ ಕಾಯೊ ಅ.ಪ


ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ

e್ಞÁನಾದಿ ಆನಂದ ಸುಗುಣ ಸಿಂಧು

ದೀನ ಬಾಂಧವ ನಿನ್ನಧೀನದವ ನಾನಯ್ಯ

ನೀನೆನ್ನ ನಿಧಿ ನಿತ್ಯ ಪವಮಾನ ಹೃತ್ಸದನ 1


ವಿದ್ಯ ಬುದ್ಧಿ e್ಞÁನ ಮನಕರಣ ಶಕ್ತಿ

ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ

ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ

ಸಿದ್ಧಿಸೈ ಈ e್ಞÁನ ಸರ್ವಕಾಲದಿ ದೇವ 2


ನಾನು ನನ್ನದು ಎಂಬ ದೋಷದ ಮಕರಿ

ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ

ದಾನವಂತಕನೆ ಶ್ರೀ ಜಯೇಶವಿಠಲ

ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ 3

***