ದೂರು ಮಾಡುವರೇನೆ , ರಂಗಯ್ಯನ
ದೂರು ಮಾಡುವರೇನೆ ||ಪ||
ದೂರು ಮಾಡುವರೇನೆ ಚಾರು ಮಂದಿಯೊಳಗೆ
ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ||ಅ.ಪ||
ನಂದಗೋಕುಲದಲ್ಲಿ ಮಂದೆ ಗೋವುಗಳ
ಮುಂದೆ ಕೊಳಲನೂದಿ ಚಂದದಿ ಬರುವನ ||
ಕಳ್ಳತನದಲ್ಲಿ ಗೊಲ್ಲರ ಮನೆ ಪೊಕ್ಕು
ಗುಲ್ಲು ಮಾಡದವರ ಗಲ್ಲ ಕಚ್ಚಿದನೆಂದು ||
ಕಾಮದಿಂದಲಿ ನಿನ್ನ ಕಳವಳತನಕಾಗಿ
ಶ್ಯಾಮ ಸುಂದರ ಶ್ರೀ ಪುರಂದರ ವಿಠಲನ ||
***
***
ದೂರು ಮಾಡುವರೇನೆ ರಂಗಯ್ಯನ
Navroj – Rupaka
P: dUru mADuvarEne rangayyana
C1: dUru mADuvarEne cAru maddiyoLage mUru lOkake muddu tOrO rangayyana
2: nandagOkuladalli mandE gOvugaLa munde koLalnUdi chandadi baruvana
3: kaLLatanadalli gollara mane hokku gullu mADadeyavara galla kaccidanendu
4: kAmadindali ninna kaLavaLa tanAkagi shyAma sundara shrI purandara viTTalana
***
Meaning: Are you going to put out Rangaraya?
C1: Are you going to put out the Rangayya who loves(muddu toro) the three worlds
C2: The one who comes playing his flute melodiously(chandadi) with his cows in Nanda Gokula,
C3: Because he streaked(kallatanadalli) in to the houses of cowherds and kissed (Kacchida-bit) the cheeks of their wives?
C4: Because(tanakagi) you are interested (kalavala)(in him) and passionate(kamatana dali), (are you going to put out) Shyama sundara purandaravithala?
***
ರಾಗ ಮಧ್ಯಮಾವತಿ ಅಟತಾಳ
ದೂರು ಮಾಡುವರೇನೆ ಕೃಷ್ಣಯ್ಯನ
ದೂರು ಮಾಡುವರೇನೆ ||ಪ||
ಮೂರುಲೋಕವನೆಲ್ಲ ಸಲಹೋ ಕೃಷ್ಣಯ್ಯನ ||ಅ||
ನಂದಗೋಕುಲದಲಿ ಮಂದೆ ಗೋವುಗಳ
ಮೂಂದೆ ಕೊಳಲನೂದಿ ಚಂದದಿ ಬರುವನ ||
ಕಾಮಕುಂದಲೆನ್ನ ಕಳವಳಗೊಳ್ಳುತ
ಸೋಮಸುಂದರ ಮುದ್ದು ಪುರಂದರವಿಠಲನ ||
**********